DAKSHINA KANNADA
ಹಿಂದೂ ಸಮಾಜಕ್ಕೆ ಜಿಹಾದಿಗಳನ್ನು ಮಟ್ಟ ಹಾಕಲು ಗೊತ್ತಿದೆ – ಮುರಳೀಕೃಷ್ಣ ಹಸಂತಡ್ಕ
ಪುತ್ತೂರು ಸೆಪ್ಟೆಂಬರ್ 12: ನಾಗಮಂಗಲದಲ್ಲಿಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆ ಖಂಡಿಸಿ ಪುತ್ತೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಪುತ್ತೂರಿನ ದರ್ಬೆ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಹಿಂದೂ ಸಮಾಜದ ಮೇಲೆ ಜಿಹಾದಿಗಳು ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ. ಮಂಡ್ಯದಲ್ಲಿ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಪೋಲೀಸರು ಆರೋಪ ಪಟ್ಟಿಯಲ್ಲಿ ಹಿಂದೂಗಳ ಹೆಸರನ್ನೇ ಸೇರಿಸಿದ್ದಾರೆ. ಎಫ್ಐಆರ್ ನಲ್ಲಿ ಹಿಂದೂಗಳ ಹೆಸರು ಸೇರಿಸಿದ ಪೋಲೀಸರ ಮೇಲೆಯೇ ಮಂಡ್ಯದಲ್ಲಿ ಮೊದಲ ಕಲ್ಲು ಬಿದ್ದಿದೆ. ಇಂಥ ಘಟನೆ ಮುಂದಿನ ದಿನಗಳಲ್ಲಿ ನಡೆದರೆ ಹಿಂದೂ ಸಮಾಜ ಸೂಕ್ತ ಉತ್ತರ ನೀಡಲಿದೆ.
ಹಿಂದೂ ಸಮಾಜಕ್ಕೆ ಜಿಹಾದಿಗಳನ್ನು ಮಟ್ಟ ಹಾಕಲು ಗೊತ್ತಿದೆ.ಇದೇ ರೀತಿ ಮುಂದುವರಿದರೆ ಜಿಹಾದಿಗಳನ್ನು ಅಟ್ಟಾಡಿಸಿ ಓಡಿಸುವ ಕಾರ್ಯ ನಡೆಯಲಿದೆ. ಸರಕಾರ,ಪೋಲೀಸ್ ಇಲಾಖೆ ಮಂಡ್ಯದಲ್ಲಿ ಗಲಭೆ ಸೃಷ್ಠಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದೇ ಹೋದಲ್ಲಿ ಗಲ್ಲಿ ಗಲ್ಲಿಯಲ್ಲಿ ಇಂಥ ಪ್ರತಿಭಟನೆಗಳು ನಡೆಯಲಿದೆ. ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.
You must be logged in to post a comment Login