LATEST NEWS
ಮತ್ತೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಸಂಪ್ಯ ಠಾಣೆ
ಮತ್ತೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಸಂಪ್ಯ ಠಾಣೆ
ಪುತ್ತೂರು, ಡಿಸೆಂಬರ್ 04 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಪ್ಯ ಠಾಣೆ ಇದೀಗ ಮತ್ತೆ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸಂಪ್ಯ ಮಸೀದಿ ಬಳಿ ಡಿಸೆಂಬರ್ 2 ರಂದು ನಡೆದ ಅಹಿತಕರ ಘಟನೆ ಮತ್ತೆ ಹಿಂದೂ ಸಂಘಟನೆಗಳು ಹಾಗೂ ಸಂಪ್ಯ ಪೋಲೀಸ್ ಠಾಣೆಯ ನಡುವಿನ ಜಂಗೀ ಕುಸ್ತಿಗೆ ಅಖಾಡ ರೂಪಿಸಿದೆ.
ಈದ್ ಮಿಲಾದ್ ಹಿನ್ನಲೆಯಲ್ಲಿ ಸಂಪ್ಯ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಮಸೀದಿ ಪರಿಸರದಲ್ಲಿ ಜನಜಂಗುಳಿಯೂ ಸಾಕಷ್ಟು ಸೇರಿತ್ತು.
ಈ ಸಂದರ್ಭದಲ್ಲಿ ಪುತ್ತೂರಿನಿಂದ ತನ್ನ ಕಾರಿನಲ್ಲಿ ಸಂಪ್ಯ ಮೂಲಕ ಮನೆಗೆ ಹೋಗುತ್ತಿದ್ದ ನವೀನ್ ಎನ್ನುವ ಯುವಕನ ಕಾರಿಗೆ ಮುಸ್ಲಿಂ ಮಹಿಳೆಯೋರ್ವಳು ಆಕಸ್ಮಿಕವಾಗಿ ಅಡ್ಡ ಬಂದ ಪರಿಣಾಮ ಮಹಿಳೆ ಗಾಯಗೊಂಡಿದ್ದರು.
ಈ ವೇಳೆ ತಕ್ಷಣ ಸ್ಪಂದಿಸಿದ ಆ ಯುವಕ ಮಹಿಳೆಯನ್ನು ಇನ್ನೊಂದು ಕಾರಿನಲ್ಲಿ ತಗೊಂಡು ಆಸ್ಪತ್ರೆಗೂ ಸೇರಿಸಿದ್ದಾನೆ. ಬಳಿಕ ತನ್ನ ಕಾರನ ಬಳಿ ಬಂದಿದ್ದಾನೆ.
ಈ ಸಂದರ್ಭದಲ್ಲಿ ಅಲ್ಲಿಗೆ ಸುಮಾರು 30 ರಿಂದ 40 ಜನರಿದ್ದ ತಂಡ ನವೀನ್ ಮೇಲೆ ಮುಗಿ ಬಿದ್ದಿದೆ.
ನವೀನ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ತಂಡ, ಆತನ ಕಾರನ್ನೂ ಪುಡಿಗೈದಿದೆ.
ಆ ಸಂದರ್ಭದಲ್ಲಿ ಘಟನೆಯನ್ನು ತನ್ನ ಮೊಬೈಲ್ ಮೂಲಕ ಚಿತ್ರೀಕರಿಸುತ್ತಿದ್ದ ಪೋಲೀಸ್ ಪೇದೆಯ ಮೇಲೂ ಮುಗಿಬಿದ್ದ ತಂಡ ಪೇದೆಯ ಮೊಬೈಲ್ ಕಸಿದು ವಿಡಿಯೋ ಅಳಿಸಿ ಹಾಕಿ ಬೆದರಿಕೆಯನ್ನೂ ಒಡ್ಡಿದೆ.
ಹಲ್ಲೆ ಸಂಬಂಧ ಯುವಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಸಂಪ್ಯ ಪೋಲೀಸರಿಗೆ ಘಟನೆ ಕುರಿತಂತೆ ಲಿಖಿತ ದೂರನ್ನೂ ನೀಡಿದ್ದಾನೆ.
ಆದರೆ ಸಂಪ್ಯ ಪೋಲೀಸರು ದೂರಿಗೆ ಸಂಬಂಧಿಸಿದಂತೆ ಈ ವರೆಗೆ ಯಾವೊಬ್ಬನನ್ನೂ ಬಂಧಿಸಿಲ್ಲ ಎನ್ನುವ ಆರೋಪ ಇದೀಗ ಹಿಂದೂ ಪರ ಸಂಘಟನೆಗಳಿಂದ ಕೇಳಿ ಬರುತ್ತಿದೆ.
ಮುಸ್ಲಿಮರು ನೀಡಿದ ಸಣ್ಣ ಘಟನೆಯ ದೂರಿಗೂ ತಕ್ಷಣ ಸ್ಪಂದಿಸಿ ಹಿಂದೂ ಯುವಕರ ಮನೆಗೆ ನುಗ್ಗಿ ಬಂಧಿಸುವ ಸಂಪ್ಯ ಪೋಲೀಸರು ಈ ವಿಚಾರದಲ್ಲಿ ಯಾಕೆ ಮೀನಮೇಷ ಎಣಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಹಿಂದೂ ಸಂಘಟನೆಗಳದ್ದಾಗಿದೆ.
ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಬಹುತೇಕ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಸಂಘಟನೆ ಹಾಗೂ ಸಂಪ್ಯ ಪೋಲೀಸ್ ಠಾಣೆಯ ನಡುವೆ ಗೊಂದಲಗಳೂ ಏರ್ಪಟ್ಟಿದೆ.
ಪುತ್ತೂರಿನಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಇದು ಮುಂದುವರಿದರೆ ಪುತ್ತೂರಿನಲ್ಲಿ ಕೋಮುಗಲಭೆ ಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಎಚ್ಚರಿಕೆ ಮಾತನ್ನು ಹಿಂದೂ ಮುಖಂಡರಾದ ಡಾ.ಎಂ.ಕೆ.ಪ್ರಸಾದ್ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಹಾಗೂ ಸರಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಈ ರೀತಿಯ ದ್ವಂದ ನೀತಿಗೆ ಠಾಣೆಯ ಠಾಣಾಧಿಕಾರಿಗಳ ಹಿಂದೂ ವಿರೋಧಿ ನೀತಿಯೇ ಕಾರಣ ಎನ್ನುವ ಆರೋಪ ಹಿಂದೂ ಸಂಘಟನೆಗಳದ್ದಾಗಿದೆ.