LATEST NEWS
ಹಿಂದೂಗಳ ಮೇಲೆ ದಾಳಿ ಆದಾಗ ಗಾಂಧೀಜಿಯನ್ನೇ ಬಿಟ್ಟಿಲ್ಲ ನಾವು ಇನ್ನು ನೀವು ಯಾವ ಲೆಕ್ಕ – ಹಿಂದೂ ಮಹಾಸಭಾ

ಮಂಗಳೂರು: ನಂಜನಗೂಡು ದೇವಸ್ಥಾನ ಧ್ವಂಸ ಪ್ರಕರಣದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಿಂದೂ ಮಹಾಸಭಾದ ಮುಖಂಡರು ಬಿಜೆಪಿಗೆ ನೇರ ಸವಾಲನ್ನು ಹಾಕಿದ್ದು. ಹಿಂದೂಗಳ ಮೇಲೆ ದಾಳಿ ಆದಾಗ ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮೀ ನೀವು ಯಾವ ಲೆಕ್ಕ. ಹಿಂದೂಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಗಾಂಧಿಯನ್ನು ಹತ್ಯೆ ಮಾಡಕ್ಕಾಗುತ್ತೆ. ನಿಮ್ಮ ವಿಚಾರದಲ್ಲಿ ನಾವು ಅಲೋಚಿಸಬೇಕಾಗುತ್ತದೆ ಎಂದು ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೂರಾರು ವರ್ಷ ಇತಿಹಾಸ ಹೊಂದಿರುವ ದೇವಾಲಯಗಳನ್ನು ಅನಧಿಕೃತ ಎನ್ನುವ ಅಧಿಕಾರ ನ್ಯಾಯಾಲಕ್ಕಿದೆಯೇ ಎಂಬ ಪ್ರಶ್ನೆ ಮಾಡಬೇಕಿದೆ. ಕೇವಲ ಹಿಂದೂ ಶ್ರದ್ದಾ ಕೇಂದ್ರಗಳ ಮೇಲೆ ದಾಳಿಯಾಗುತ್ತದೆ. ಬಿಜೆಪಿ ಸರ್ಕಾರವಿದ್ದಾಗಲೇ ಹಿಂದೂ ದೇವಾಲಯ ನೆಲಸಮವಾಗಿರುತ್ತದೆ ಯಾಕೆ ಎಂದು ಪ್ರಶ್ನಿಸಿದರು. ಇವರದ್ದೇ ಸರ್ಕಾರ ಇದೆ. ನೀವೂ ಪ್ರಾಮಾಣಿವಾಗಿ ಹೋರಾಟ ಮಾಡಿದ್ದರೆ, ಬಿಜೆಪಿಗೆ ಮತ ನೀಡಬೇಡಿ, ಹಿಂದೂ ಮಹಾಸಭಕ್ಕೆ ಓಟು ನೀಡಿ ಎಂದರು. ಈ ಪ್ರಕರಣದಲ್ಲಿ ಕೇವಲ ಅಧಿಕಾರಿಗಳ ತಲೆದಂಡ ಯಾಕೆ ಎಂದರು.

ಸಣ್ಣ ತಪ್ಪು ಆಗಿದೆ ಎಂದು ಹೇಳುವುದು ದೇವಸ್ಥಾನವನ್ನು ಕೆಡವುದು ಸಣ್ಣ ತಪ್ಪೇ ಎಂದು ಪ್ರಶ್ನಿಸಿದರು. ನಿಮಗೆ ತಾಕತ್ತಿದ್ದರೆ ಅನಧಿಕೃತ ಮಸೀದಿ ಪಟ್ಟಿಯಲ್ಲಿರುವ ಒಂದೇ ಒಂದು ಮಸೀದಿಯನ್ನು ಒಡೆದು ನೋಡಿ. ನಿಮ್ಮನ್ನು ಬಿಡ್ತಾರಾ ಎಂದು ಸವಾಲು ಹಾಕಿದರು.