DAKSHINA KANNADA
ಹಿಂದೂ ಸಮಾಜ ಗೇಲಿ ಮಾಡಿದರೆ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಿದೆ – ಹಿಂದೂ ಜಾಗರಣ ವೇದಿಕೆ ಮುಖಂಡ ಅಜಿತ್ ಮಡಿಕೇರಿ

ಪುತ್ತೂರು ಜುಲೈ 07: ಇಲ್ಲೊಬ್ಬ ಶಾಸಕ ಹಿಂದೂ ಸಂಘಟನೆಯನ್ನು ಗೇಲಿ ಮಾಡುತ್ತಿದ್ದಾನೆ. ಹೋರಾಟ ಮಾಡುವವರು ಬಾಲ ಮುದುಡಿ ಕುಳಿತುಕೊಂಡಿದ್ದಾರೆ ಎನ್ನುತ್ತಾನೆ. ನಿನ್ನಂತಹ ಶಾಸಕರನ್ನು ಜಿಲ್ಲೆಯ ಜನ ಎಷ್ಟೊ ನೋಡಿ ಆಗಿದೆ. ಈ ಪೊಳ್ಳು ಬೆದರಿಕೆಗಳಿಗೆ ಹೆದರುವ ಮಕ್ಕಳು ನಾವಲ್ಲ ಎಂದು ಜಾಗರಣ ವೇದಿಕೆ ಮುಖಂಡ ಅಜಿತ್‌ಮಡಿಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ದರ್ಬೆ ವೃತ್ತದಲ್ಲಿ ನಡೆದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಹಿಂದೂಗಳನ್ನು ದಮನಿಸುವ ಕಾರ್ಯದಲ್ಲಿ ನಿರತವಾಗಿದೆ.ಹಿಂದೂ ಸಂಘಟನೆಗಳ ಕಾರ್ಯಕರ್ತ,ಮುಖಂಡರ ಮನೆಗೆ ರಾತ್ರಿ ವೇಳೆ ನುಗ್ಗುತ್ತಿದೆ,

ಫೋಟೋ ತೆಗೆದು ಕಿರುಕುಳ ನೀಡುತ್ತಿದೆ. ಸರಕಾರ ಪೋಲೀಸ್ ಇಲಾಖೆಯನ್ನು ಬಳಸಿಕೊಂಡು ಈ ಕಾರ್ಯ ಮಾಡುತ್ತಿದೆ. ಇಂಥ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಂಘಟನೆಗಳು ಹೆದರುವ ಪ್ರಶ್ನೆಯೇ ಇಲ್ಲ, ಇಂಥ ಕೆಲಸವನ್ನು ಸರಕಾರ ಕೂಡಲೇ ನಿಲ್ಲಿಸಬೇಕು,ಇಲ್ಲದೇ ಹೋದಲ್ಲಿ ಪರಿಣಾಮ ಘೋರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಲ್ಲೊಬ್ಬ ಶಾಸಕ ಹಿಂದೂ ಸಂಘಟನೆಯನ್ನು ಗೇಲಿ ಮಾಡುತ್ತಿದ್ದಾನೆ. ಹೋರಾಟ ಮಾಡುವವರು ಬಾಲ ಮುದುಡಿ ಕುಳಿತುಕೊಂಡಿದ್ದಾರೆ ಎನ್ನುತ್ತಾನೆ. ನಿನ್ನಂತಹ ಶಾಸಕರನ್ನು ಜಿಲ್ಲೆಯ ಜನ ಎಷ್ಟೊ ನೋಡಿ ಆಗಿದೆ. ಈ ಪೊಳ್ಳು ಬೆದರಿಕೆಗಳಿಗೆ ಹೆದರುವ ಮಕ್ಕಳು ನಾವಲ್ಲ, ಅಲ್ಪಸಂಖ್ಯಾತ ಗುಲಾಮರ ಒಲೈಕೆಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನಾಳೆ ಕಾಶ್ಮೀರದಲ್ಲಿ ಆದ ಘಟನೆಗಳು ಜಿಲ್ಲೆಯಲ್ಲಿ ನಡೆದರೆ ನಿನ್ನ ಗುಲಾಮರು ನಿಮ್ಮ ಜೊತೆ ನಿಲ್ಲೋದಿಲ್ಲ, ಆಗ ನಿಲ್ಲೋದು ಇದೇ ಹಿಂದೂ ಸಂಘಟನೆಗಳು ಎಂದು ಹೇಳಿದರು.