DAKSHINA KANNADA
ಹಿಂಜಾವೇ ಮುಖಂಡ ಕಾರ್ತಿಕ್ ಮೇರ್ಲ ಬರ್ಬರ ಹತ್ಯೆ – ನಾಲ್ವರ ಬಂಧನ
ಹಿಂಜಾವೇ ಮುಖಂಡ ಕಾರ್ತಿಕ್ ಮೇರ್ಲ ಬರ್ಬರ ಹತ್ಯೆ – ನಾಲ್ವರ ಬಂಧನ
ಮಂಗಳೂರು ಸೆಪ್ಟೆಂಬರ್ 5: ಪುತ್ತೂರಿನಲ್ಲಿ ಹಿಂಜಾವೇ ಮುಖಂಡನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪುತ್ತೂರಿನ ಆರ್ಯಾಪು ನಿವಾಸಿಗಳಾದ ಕಿರಣ್(36), ಚರಣ್(26), ಉಳ್ಳಾಲ ನಿವಾಸಿ ಪ್ರೀತೇಶ್(28) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಅತ್ತಾವರ ನಿವಾಸಿ ಸ್ಟೀವನ್ ಮೊಂತೇರೊನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಪ್ಯ ಪೊಲೀಸ್ ಠಾಣೆ ಮುಂಭಾಗ ಗಣೇಶೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸಾರ್ವಜನಿಕರ ಎದುರಲ್ಲೇ ಹಿಂಜಾವೇ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ(30) ಅವರನ್ನು ಹಣಕಾಸು ವಿಚಾರದಲ್ಲಿ ಕಿರಣ್ ಮತ್ತು ಸೋದರ ಚರಣ್ ಹಾಗೂ ಪ್ರೀತೇಶ್ ಕೊಲೆ ಮಾಡಿದ್ದರು.
ಕಾರ್ತಿಕ್ ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಹಣವನ್ನು ಪಡೆದಿದ್ದರು. ಈ ವಿಚಾರಕ್ಕೆ ಕಾರ್ತಿಕ್ ಜೊತೆ ಕಿರಣ್ ಮತ್ತು ಸೋದರ ಚರಣ್ ಹಾಗೂ ಪ್ರೀತೇಶ್ ಜಗಳಕ್ಕಿಳಿದಿದ್ದರು. ಆಗ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ ಕೋಪಗೊಂಡ ಮೂವರು ಆರೋಪಿಗಳು ಕಾರ್ತಿಕ್‍ಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.
ಈ ಸಂಬಂಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸುತ್ತಮುತ್ತಲ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.