Connect with us

MANGALORE

ಸಂಚಾರಿ ಶುಲ್ಕದಲ್ಲಿ ಬದಲಾವಣೆ, ಎಮಿಷನ್ ಟೆಸ್ಟ್ ಕೇಂದ್ರಗಳಲ್ಲಿ ವಾಹನಗಳ ಭರ್ಜರಿ ಜಮಾವಣೆ

ಸಂಚಾರಿ ಶುಲ್ಕದಲ್ಲಿ ಬದಲಾವಣೆ, ಎಮಿಷನ್ ಟೆಸ್ಟ್ ಕೇಂದ್ರಗಳಲ್ಲಿ ವಾಹನಗಳ ಭರ್ಜರಿ ಜಮಾವಣೆ

ಮಂಗಳೂರು, ಸೆಪ್ಟಂಬರ್ 05: ಕೇಂದ್ರ ಸರಕಾರ ಮೋಟಾರು ವಾಹನ ಕಾಯ್ದೆಯಲ್ಲಿ ತಂದ ಬದಲಾವಣೆ ಬಿಸಿ ಇದೀಗ ವಾಹನ ಮಾಲಕರಿಗೆ ಹಾಗೂ ಚಾಲಕರಿಗೆ ತಟ್ಟಲಾರಂಭಿಸಿದೆ.

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಮಾಡದೇ ಇದ್ದ ವಾಹನಗಳಿಗೆ ವಿಧಿಸಲಾಗುತ್ತಿದ್ದ 100 ರಿಂದ 300 ರ ತನಕವಿದ್ದ ಶುಲ್ಕ ಇದೀಗ 10 ಸಾವಿರಕ್ಕೆ ತಲುಪಿದೆ. ಈ ಕಾನೂನು ಈಗಾಗಲೇ ಜಾರಿಗೆ ಬಂದಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಇದೀಗ ಭಾರೀ ಬೆಳವಣಿಗೆಗಳು ನಡೆಯಲಾರಂಭಿಸಿದೆ.

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಮಾಡಿಸದೇ ಓಡಾಡುತ್ತಿದ್ದ ಕಾರುಗಳು ಹಾಗೂ ಬೈಕ್ ಗಳು ಇದೀಗ ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ಮುಗಿ ಬೀಳುತ್ತಿವೆ. ಸಿಕ್ಕಿಬಿದ್ದಲ್ಲಿ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗಬಹುದೆಂಬ ಭಯದಲ್ಲಿ ಇದೀಗ ಎಲ್ಲರೂ ಸರ್ಟಿಫಿಕೇಟ್ ಮಾಡಿಸಿಕೊಳ್ಳಲು ಮುಗಿ ಬೀಳುತ್ತಿರುವ ದೃಶ್ಯ ಮಂಗಳೂರಿನ ಹಲವು ಕಡೆ ಕಂಡು ಬರಲಾರಂಭಿಸಿದೆ.

ಮಂಗಳೂರಿನಲ್ಲಿ ಈಗಾಗಲೇ ನಂಬರ್ ಪ್ಲೇಟ್ ಇಲ್ಲದೆ ಚಲಾಯಿಸುತ್ತಿ 75 ಬೈಕ್ ಗಳನ್ನು ಪೋಲೀಸರು ವಶಕ್ಕೆ ಪಡೆದಿರುವ ನಡುವೆಯೇ ವಾಹನಗಳ ಡೊಕ್ಯುಮೆಂಟ್ ಪರಿಶೀಲನೆಗೂ ಪೋಲೀಸರು ಮುಂದಾಗಿರುವುದು ಕಾನೂನು ಭಂಜಕರ ನಡುಕಕ್ಕೆ ಕಾರಣವಾಗಿದೆ.

Facebook Comments

comments