Connect with us

LATEST NEWS

ಕುಂದಾಪುರ -ಮುಂದುವರೆದ ಹಿಜಬ್ vs ಕೇಸರಿ ವಿವಾದ

ಕುಂದಾಪುರ ಫೆಬ್ರವರಿ 5: ಕುಂದಾಪುರದಲ್ಲಿ ಹಿಜಬ್ vs ಕೇಸರಿ ವಿವಾದ ಮುಂದುವರೆದಿದ್ದು, ಇಂದು ಮುಸ್ಲಿಂ ವಿಧ್ಯಾರ್ಥಿನಿಯರು ಹಿಜಬ್ ಧರಿಸುವುದನ್ನು ವಿರೋಧಿಸಿ ಆರ್ ಎನ್ ಶೆಟ್ಟಿ ಮತ್ತು ಬಂಡಾರ್ಕಾರ್ಸ್ ಕಾಲೇಜಿವ ವಿಧ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದ್ದಾರೆ.


ಆರ್.ಎನ್ ಶೆಟ್ಟಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕುಂದೇಶ್ವರ ಬಳಿಯಿಂದ ಕೇಸರಿ ಶಾಲು ಧರಿಸಿ ಮೆರವಣಿಗೆ ಮೂಲಕ ಕಾಲೇಜಿಗೆ ಆಗಮಿಸಿದರು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಕೇಸರಿ ತೊಟ್ಟ ವಿದ್ಯಾರ್ಥಿಗಳಿಂದ ಜೈಶ್ರೀರಾಮ್ ಘೋಷಣೆ, ಹರಹರ ಮಹಾದೇವ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದ್ದಾರೆ.


ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಕಾಲೇಜು ಆಡಳಿತ ಮಂಡಳಿಯ ಜೊತೆ ಚರ್ಚಿಸಿದರು. ಗೊಂದಲಮಯ ವಾತಾವರಣದ ಹಿನ್ನೆಲೆಯಲ್ಲಿಆರ್.ಎನ್. ಶೆಟ್ಟಿ ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಯಿತು. ಇನ್ನು ಕುಂದಾಪುರದ ಭಂಡಾ ರ್ಕಾರ್ಸ್ ಕಾಲೇಜು ಬಳಿಯೂ ಕಂಡುಬಂದಿದೆ . ವಿದ್ಯಾರ್ಥಿನಿಯರು ಸಹಿತ ಕೆಲವಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು. ಕಾಲೇಜ್ ತನಕವೂ ಕೇಸರಿ ಶಾಲು ಧರಿಸಿ ಬಂದು ಬಳಿಕ ಶಾಲು ತೆಗೆದಿಟ್ಟು ಕಾಲೇಜಿಗೆ ಪ್ರವೇಶಿಸಿದರು.

Advertisement
Click to comment

You must be logged in to post a comment Login

Leave a Reply