LATEST NEWS
ಹಿಜಬ್ ವಿವಾದ – ಮಂಗಳೂರಿನ ರಥಬೀದಿಯಲ್ಲಿರುವ ಸರಕಾರಿ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ

ಮಂಗಳೂರು ಮಾರ್ಚ್ 5: ಹಿಜಾಬ್ ವಿವಾದ ತಾರಕಕ್ಕೇರಿದ್ದ ಮಂಗಳೂರಿನ ಕಾರ್ಟ್ ಸ್ಟ್ರೀಟ್ ನಲ್ಲಿರುವ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಸಾರಲಾಗಿದೆ
ಕಾರ್ ಸ್ಟ್ರೀಟ್ ನಲ್ಲಿರುವ ಈ ಸರಕಾರಿ ಕಾಲೇಜಿನಲ್ಲಿ ಕಳೆದ 2 ದಿನಗಳಿಂದ ಹಿಜಬ್ ವಿಚಾರಕ್ಕೆ ಗೊಂದಲ ಏರ್ಪಟ್ಟಿತ್ತು, ನಿನ್ನೆ ಇದೇ ವಿಚಾರವಾಗಿ ವಿಧ್ಯಾರ್ಥಿನಿಯರು ಹಾಗೂ ಕೆಲವು ವಿಧ್ಯಾರ್ಥಿಗಳ ನಡುವೆ ವಾಗ್ವಾದ ಏರ್ಪಟ್ಟಿದ್ದು, ಹಿಜಬ್ ಧರಿಸಿದ ವಿಧ್ಯಾರ್ಥಿನಿಯರನ್ನು ಕಾಲೇಜಿನ ಕೆಲ ಉಪನ್ಯಾಸಕರು ತರಗತಿಗೆ ತೆರಳದಂತೆ ನಿನ್ನೆ ತಡೆದಿದ್ದು ಎಂದು ಆರೋಪಿಸಲಾಗಿತ್ತು.

ಈ ಹಿನ್ನಲೆ ಮತ್ತೆ ಗೊಂದಲ ಏರ್ಪಡದಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಿಸಲಾಗಿದ್ದು, ಸದ್ಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸದ್ಯ ಆನ್‌ಲೈನ್ ತರಗತಿಯನ್ನು ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಮೆಸೇಜ್ ಕಳುಹಿಸಲಾಗಿದೆ.