LATEST NEWS
ಹಿಜಬ್ ವಿವಾದ ನಾಳೆ ತೀರ್ಪು ಪ್ರಕಟಿಸಲಿರುವ ರಾಜ್ಯ ಹೈಕೋರ್ಟ್
ಬೆಂಗಳೂರು ಮಾರ್ಚ್ 14: ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದ ಸೃಷ್ಠಿಸಿದ್ದ ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಾಳೆ ತೀರ್ಪು ನೀಡಲಿದೆ. ತರಗತಿಯಲ್ಲಿ ಹಿಜಬ್ ಧರಿಸಿ ಪಾಠ ಕೇಳಲು ಅವಕಾಶ ನೀಡುವಂತೆ ಮುಸ್ಲಿಂ ವಿಧ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಉಡುಪಿ ಸರಕಾರಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಬ್ ವಿವಾದ ಕೊನೆಗೂ ಇಡೀ ರಾಜ್ಯಕ್ಕೆ ಹಬ್ಬಿದ್ದು, ಹಲವು ಕಡೆಗಳಲ್ಲಿ ಗಲಭೆಗೆ ಕಾರಣವಾಗಿತ್ತು. ಮೊದಲು ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದು ಬಳಿಕ ಅದನ್ನು ಹೈಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆದಿದೆ. ಸುಮಾರು 9ಕ್ಕೂ ಅಧಿಕ ರಿಟ್ ಅರ್ಜಿಗಳು ಗಾಗೂ 20 ಕ್ಕೂ ಅಧಿಕ ಮಧ್ಯಂತರ ಅರ್ಜಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದವು.
ಈ ಎಲ್ಲಾ ಅರ್ಜಿದಾರರ ವಾದ ಪ್ರತಿವಾದಗಳನ್ನು ಸತತ 11 ದಿನಗಳ ಕಾಲ ಅಲಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು, ಇದೀಗ ನಾಳೆ ಇಡೀ ರಾಜ್ಯವೇ ನಿರೀಕ್ಷೆಯಿಂದ ಕಾಯುತ್ತಿರುವ ಹಿಜಬ್ ವಿವಾದಕ್ಕೆ ಸಂಬಂಧಿಸಿದ ತೀರ್ಪು ಬರಲಿದೆ.