Connect with us

    LATEST NEWS

    ಅಕಾಲಿಕ ಮಳೆ, ಸಮುದ್ರದಲ್ಲಿ ಅಲೆಗಳ ಅಬ್ಬರ : ಕರಾವಳಿಯಲ್ಲಿ ಹೈ ಅಲರ್ಟ್

    ಅಕಾಲಿಕ ಮಳೆ, ಸಮುದ್ರದಲ್ಲಿ ಅಲೆಗಳ ಅಬ್ಬರ :ಕರಾವಳಿಯಲ್ಲಿ ಹೈ ಅಲರ್ಟ್

    ಮಂಗಳೂರು, ಎಪ್ರಿಲ್ 21 : ಕರಾವಳಿಯಲ್ಲಿ ಅಕಾಲಿಕ ಮಳೆ, ಸಮುದ್ರದಲ್ಲಿ ಅಲೆಗಳ ಅಬ್ಬರದ ಹಿನ್ನೆಲೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಮೀನುಗಾರಿಕಾ ಇಲಾಖೆ ಈ ಬಗ್ಗೆ ಮೀನುಗಾರಿಗೆ ಮಾಹಿತಿ ರವಾನಿಸಿದೆ.

    ಇಂಡಿಯನ್ ನೇಶನಲ್ ಸೆಂಟರ್ ಫಾರ್ ಓಶಿಯನ್ ಇನ್ಪಾರ್ಮೇಷನ್ ಸಮುದ್ರದಲ್ಲಿ ತೆರೆಗಳ ಅಬ್ಬರ ಹೆಚ್ಚಾಗುವ ಮಾಹಿತಿ ನೀಡಿದೆ.

    ಮೀನುಗಾರರು ಈ ಬಗ್ಗೆ ಜಾಗೃತೆ ವಹಿಸಬೇಕೆಂದು ಅದು ಎಚ್ಚರಿಕೆ ನೀಡಿದೆ.

    ಪ್ರತೀ 17-22 ಸೆಕೆಂಡ್ ಗಳಿಗೊಮ್ಮೆ 2-3 ಮೀಟರ್ ಎತ್ತರದ ಅಲೆಗಳು ದಡಕ್ಕಪ್ಪಳಿಸುವ ಎಚ್ಚರಿಕೆ ನೀಡಿದೆ.

    ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶದಂತೆ ಮತ್ತು ಮೀನುಗಾರಿಕಾ ಇಲಾಖಾ ಸೂಚನೆ ಮೇರೆಗೆ ಈಗಾಗಲೇ ದಕ್ಕೆಯಲ್ಲಿ ಹಲವು ಬೋಟುಗಳು ಲಂಗರು ಹಾಕಿವೆ. ಸಮುದ್ರದಲ್ಲಿ ಅಪಾಯದ ಸೂಚನೆ ಹಿನ್ನಲೆಯಲ್ಲಿ ಅನೇಕ ಬೋಟುಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಧಕ್ಕೆಗೆ ವಾಪಸ್ಸಾಗುತ್ತಿವೆ.

    ಈ ಬಗ್ಗೆ ಪ್ರತಿಕ್ರೀಯಿಸಿರುವ ದ.ಕ. ಜಿಲ್ಲಾಧಿಕಾರಿ .”ಅಕಾಲಿಕ ಮಳೆ‌ ಹಾಗೂ ಸಮುದ್ರದಲ್ಲಿ ಅಲೆಗಳ ಅಬ್ಬರವಿದೆ ಹೆಚ್ಚೇನು ಭಯಪಡುವಂತಹ ವಾತಾವರಣವಿಲ್ಲ, “ಆದರೂ ಮುನ್ನೆಚ್ಚರಿಕೆಯ ಸಲುವಾಗಿ ಬೋಟುಗಳನ್ನು ಕರೆಯಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
    ಈ ಬಾರಿ ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ಈಗಾಗಲೇ ತಿಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *