LATEST NEWS
ಕೊರೊನಾ ಎಮೆರ್ಜೆನ್ಸಿ ಸಂದರ್ಭ ಜಿಲ್ಲೆಗೆ ಸಹಾಯ ಹಸ್ತ ಚಾಚಿದ ಸುಧಾಮೂರ್ತಿ

ಕೊರೊನಾ ಎಮೆರ್ಜೆನ್ಸಿ ಸಂದರ್ಭ ಜಿಲ್ಲೆಗೆ ಸಹಾಯ ಹಸ್ತ ಚಾಚಿದ ಸುಧಾಮೂರ್ತಿ
ಮಂಗಳೂರು ಮಾರ್ಚ್ 28 : ಕೊರೊನಾ ಭೀತಿಯಿಂದ ಕಂಗೆಟ್ಟಿರುವ ದಕ್ಷಿಣಕನ್ನಡಕ್ಕೆ ಇನ್ಪೋಸಿಸ್ ಸುಧಾಮೂರ್ತಿಯವರು ಸಹಾಯ ಹಸ್ತ ಚಾಚಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸರ ಕರೆಗೆ ಸುಧಾ ಮೂರ್ತಿ ಅವರು ಸ್ಪಂದಿಸಿದ್ದು, 36 ಗಂಟೆಗಳಲ್ಲಿ 28 ಲಕ್ಷ ರೂ.ಗಳ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವರು ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ಮೇಡಂ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‍ನ ರಾಮದಾಸ್ ಕಾಮತ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಟ್ವಿಟ್ ಮಾಡಿದ್ದಾರೆ.

ಮಹಾಮಾರಿ ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಶ್ರೀಮತಿ ಸುಧಾಮೂರ್ತಿ ಫೌಂಡೇಶನ್ ಅಗತ್ಯ ವಸ್ತುಗಳಾದ
165000 ಮಾಸ್ಕ್
5000 ಬಾಟಲ್ ಸ್ಯಾನಿಟೈಸರ್ (500 ML)
85 ಗಾಗಲ್ಸ್
03 ಬ್ಲಾಕ್ ಸರ್ಜಿಕಲ್ ಗ್ಲೌಸ್
50 ಕ್ಯಾಪ್ ಗಳು
30 ಪೂರ್ತಿ ಕಾಲು ಮುಚ್ಚುವಂತ ವೈದ್ಯಕೀಯ ವಸ್ತುಗಳು
2000 ಎನ್ 95″ ಮಾಸ್ಕ್
300 ಫಾಗ್ ಫ್ರೀ ಮಾಸ್ಕ್
60 ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್ ಅನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸರಬರಾಜು ಮಾಡಿದೆ,
ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ತುರ್ತು ಸ್ಪಂದನೆ ನೀಡಿದ ಸುಧಾಮೂರ್ತಿ ಯವರಿಗೆ ದ. ಕ. ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ಧನ್ಯವಾದ ಹೇಳಿದ್ದಾರೆ.