Connect with us

LATEST NEWS

ಕನ್ನಡಿಗರ ಕ್ಷಮೆ ಕೇಳಿದ ಕೇಂದ್ರ ಸಚಿವ

ಕನ್ನಡಿಗರ ಕ್ಷಮೆ ಕೇಳಿದ ಕೇಂದ್ರ ಸಚಿವ

ಬೆಂಗಳೂರು ಫೆಬ್ರವರಿ 19: ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶುದ್ಧ ಕನ್ನಡ ಕರ್ನಾಟಕದಲ್ಲಿರುವ ಜನರಿಗೇ ಗೊತ್ತಿಲ್ಲ. ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡದವರನ್ನು ಹೊರತುಪಡಿಸಿದರೆ ಇತರರಿಗೆ ಆ ಯೋಗ್ಯತೆಯೇ ಇಲ್ಲ ಎಂದು ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಹೇಳಿಕೆ ಕುರಿತಂತೆ ಸೋಮವಾರ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆಯುಳ್ಳ ವಿಡಿಯೋ ಹಾಕಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಪುತ್ತೂರಿನ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮಲ್ಲಿ ಮಾತನಾಡಿದ ವಿಷಯದ ಕುರಿತು ಅನಾವಶ್ಯಕವಾಗಿ ಚರ್ಚೆಗಳು ನಡೆಯುತ್ತಿವೆ. ಕೆಲ ದೃಶ್ಯ ಮಾಧ್ಯಮಗಳು ನನ್ನ ಮಾತು ಹಾಗೂ ಆಲೋಚನೆಗಳನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ. ವಾಸ್ತವಿಕತೆ ಏನೇ ಇರಲಿ. ಇದರಿಂದ ಕನ್ನಡಿಗರಿಗೆ ನೋವಾಗಿದೆ ಎಂದಾದರೆ ಕ್ಷಣೆ ಕೇಳುವುದಕ್ಕೆ ಯಾವುದೇ ಅಳುಕಿಲ್ಲ. ಕರ್ನಾಟಕದ ಜನರು ನನ್ನನ್ನು ಬೆಳೆಸಿದ್ದಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಎದುರು ಕ್ಷಮೆ ಕೇಳಲು ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಭಾಷೆ ಕುರಿತ ಅಧ್ಯಯನ ಮತ್ತಷ್ಟು ಆಳವಾಗಿ ಆಗಬೇಕಿದೆ. ಕನ್ನಡ ತರ್ಜುಮೆ ಮಾಡಿಕೊಂಡು ಕೇಳುವ ಪರಿಸ್ಥಿತಿಗೆ ಬರಬಾರದು. ನಮ್ಮ ಭಾಷೆ ಎಂದಿಗೂ ನಮ್ಮ ನೆಲದಲ್ಲಿ ವಿಜೃಂಭಿಸುತ್ತಿರಬೇಕು. ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದಾರೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *