LATEST NEWS
ಮತ್ತೆ ವಾಯುಭಾರ ಕುಸಿತ ಅಕ್ಟೋಬರ್ 17ರ ವರೆಗೆ ಭಾರೀ ಮಳೆ ಸಾಧ್ಯತೆ

ಮಂಗಳೂರು ಅಕ್ಟೋಬರ್ 15: ಮಳೆಯಿಂದ ಬಿಡುವು ಪಡೆದ ಒಂದು ದಿನದೊಳಗೆ ಮತ್ತೊಂದು ಮಳೆ ಅಬ್ಬರಕ್ಕೆ ಕರಾವಳಿ ಪ್ರದೇಶ ಸಾಕ್ಷಿಯಾಗಲಿದ್ದು. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಅಕ್ಟೋಬರ್ 17ರವರೆಗೆ ಕೇರಳ ಹಾಗೂ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲಕ್ಷದ್ವೀಪದ ಆಗ್ನೇಯ ಭಾಗದಲ್ಲಿ ಮತ್ತು ಬಂಗಳಾಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 14ರಂದು ಕೇರಳದಲ್ಲಿ ಭಾರೀ ಮಳೆಯಾಗಲಿದೆ, ಅಕ್ಟೋಬರ್ 17ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಾಯುಭಾರ ಕುಸಿತವು ಆಂಧ್ರ ಪ್ರದೇಶದ ಕಡೆ ಸಾಗಲಿದ್ದು, ಆಂಧ್ರ ಪ್ರದೇಶ ಮತ್ತು ಓಡಿಶಾ ಕರಾವಳಿಯಲ್ಲಿ ಮಂದಿನ 24 ಗಂಟೆಯಲ್ಲಿ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಕೇರಳದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಘಟ್ಟ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಕೆಲವು ನಿಬಂಧನೆಗಳನ್ನು ಹೇರಲಾಗಿದೆ.