BANTWAL
ಗುಡುಗು ಸಿಡಿಲು ಸಹಿತ ಭಾರೀ ಮಳೆ ಬಂಟ್ವಾಳ ತಾಲೂಕಿನ ಹಲವು ಮನೆಗಳಿಗೆ ಹಾನಿ

ಬಂಟ್ವಾಳ ಎಪ್ರಿಲ್ 12: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆ ಹಲವು ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ. ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ.
ಶಂಭೂರು ಗ್ರಾಮದ ಬೂತಲೆಮಾರು ಎಂಬಲ್ಲಿ ಮುತ್ತಮ್ಮ ಎಂಬವರ ಮನೆಗೆ ಹಾನಿಯಾಗಿದೆ. ಇದೇ ಗ್ರಾಮದ ಕರ್ತಪಾಲು ಎಂಬಲ್ಲಿ ಸುಂದರ ಎನ್ನುವವರ ಮನೆ ಜಖಂಗೊಂಡಿದೆ. ಸಜಿಪಮುನ್ನೂರು ಗ್ರಾಮ ದ ಮಡಿವಾಳಪಡಿಪು ಎಂಬಲ್ಲಿ ಮಾಲಿಕ ಮಡಿವಾಳ ಇವರ ಮನೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗುತ್ತದೆ, ನಜಿದ ಮುನ್ನೂರು ಗ್ರಾಮದ ಮಿತ್ತ ಕಟ್ಟ ಎಂಬಲ್ಲಿ ಕಲಿತ ಎಂಬವರ ಮನೆಗೆ ಸಿಡಿಲು ಬಡಿದಿರುವ ಘಟನೆ ನಡೆದಿದೆ.
