Connect with us

DAKSHINA KANNADA

ಬೈಕಂಪಾಡಿಯಲ್ಲಿ ಕಾರ್ಮಿಕನ ಕೊಲೆ ಮಾಡಿ ರೈಲ್ವೆ ಹಳಿಗಳ ಮೇಲೆ ಬಿಸಾಕಿದ ಕೊಲೆಗಡುಕರು..!

ಮಂಗಳೂರು : ಮಂಗಳೂರು ಹೊರವಲಯದ ಬೈಕಂಪಾಡಿಯಲ್ಲಿ ಕಾರ್ಮಿಕನೋರ್ವನ ಕೊಲೆ  ಮಾಡಿ ದೇಹವನ್ನು ಪಕ್ಕದ ರೈಲ್ವೇ ಹಳಿ ಮೇಲೆ ಬಿಸಾಡಿ ಕೊಲೆ ಗಡುಕರು ಪರಾರಿಯಾಗಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಬಾಗಲಕೋಟೆಯ ಯೆಲ್ಲಪ್ಪ (47 ) ಎಂದು ಗುರುತ್ತಿಸಲಾಗಿದ್ದು, ಈತ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ.

ಎಲ್ಲಪ್ಪನನ್ನು ಉಸಿರು ಕಟ್ಟಿಸಿ ಕೊಲೆ ಮಾಡಲಾಗಿದ್ದು ಆತನ ಶವ ಬೈಕಂಪಾಡಿ ಸಮೀಪದ ರೈಲ್ವೇ ಹಳಿಗಳ ಮೇಲೆ ಇಂದು ಮುಂಜಾನೆ  ಕಾಣ ಸಿಕ್ಕಿದೆ. ಶವ ನೋಡಿದ ಸ್ಥಳೀಯರು ಈ ಬಗ್ಗೆ ಪೋಲಿಸರಿಗೆ ಮಾಹಿ ತಿ ನೀಡಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದವರು ಆಗಮಿಸಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.