KARNATAKA
ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಜಾಸ್ತಿ ಮಳೆ – ಹವಾಮಾನ ಇಲಾಖೆ

ದೆಹಲಿ ಎಪ್ರಿಲ್ 15: ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಳೆಯು ಜೂನ್‌ನಲ್ಲಿ ಕೇರಳಕ್ಕೆ ಆಗಮಿಸಲಿದ್ದು, ಬಳಿಕ ಜುಲೈ ಮಧ್ಯದಲ್ಲಿ ಇಡೀ ದೇಶವನ್ನು ಆವರಿಸುತ್ತದೆ ಮತ್ತು ಸೆಪ್ಟೆಂಬರ್‌ನಲ್ಲಿ ಕಡಿಮೆಯಾಗುತ್ತದೆ. ಮಳೆ ದೀರ್ಘಾವಧಿಯ ಸರಾಸರಿ 87 ಸೆಂಟಿಮೀಟರ್‌ನ ಶೇಕಡಾ 106 ಎಂದು ಅಂದಾಜಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ಮುಂಗಾರಿಗೆ ಸಹಾಯ ಮಾಡುವ ಲಾ ನಿನಾ ಅಭಿವೃದ್ಧಿಗೊಳ್ಳಲಿದೆ. ಎಲ್ ನಿನೊ ಹಾಗೂ ಲಾ ನಿನಾ ಪೆಸಿಫಿಕ್ ಮಹಾಸಾಗರದಲ್ಲಿನ ಹವಾಮಾನದ ಮಾದರಿಗಳಾಗಿವೆ. ಅದು ಪ್ರಪಂಚಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರಬಹುದು.
