LATEST NEWS
ದಕ್ಷಿಣ ಕನ್ನಡ – ಪರಿಸ್ಥಿತಿ ಅವಲೋಕಿಸಿ ರಜೆ ನೀಡಲು ತಹಶಿಲ್ದಾರ್ ಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ
ಮಂಗಳೂರು ಜುಲೈ 24: ಕರಾವಳಿಯಲ್ಲಿ ಆಷಾಢ ಮಳೆ ಅಬ್ಬರ ಜೊರಾಗಿದ್ದು, ಕಳೆದೆರಡು ದಿನಗಳಿಂದ ಸುರಿಯುತ್ತಿರು ಮಳೆ ಇಂದು ಮುಂದುವರೆದಿದೆ.
ಮಳೆ ಅಬ್ಬರಕ್ಕೆ ನದಿ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಳೆ ಅಬ್ಬರ ಹೆಚ್ಚಾಗಿರುವ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ , ಪುತ್ತೂರು , ಬಂಟ್ವಾಳ ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾರ್ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಭಾರಿ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಹಯತುಲ್ ಶಾಲೆ ಗೂಡಿನ ಬಳಿ, ಕಿರಿಯ ಪ್ರಾಥಮಿಕ ಶಾಲೆ ವಳವೂರು, ಶಾರದ ಮತ್ತು ಎಸ್ ಎಲ್ ಎನ್ ಪಿ ಪಾಣೆಮಂಗಳೂರು, ಎಲ್ ಸಿ ಆರ್ ಕಕ್ಕೆ ಪದವು, ಕೆಪಿಎಸ್ ಮೊಂಟೆಪದವು, ಕುನಿಲ್ ಶಾಲೆ ತುಂಬೆ. ಬಿ ಎ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಪೆರ್ಲಬಿಯಪಾದೆ ಶಾಲೆ, ಸರಪಾಡಿ ಪ್ರೈಮರಿ ಶಾಲೆ, ಹೆಗಡೆ ಶಾಲೆ, ಪೂಪಾಡಿ ಕಟ್ಟಿ ಶಾಲೆ, ದಡ್ಡಲಕಾಡು, ಎರ್ಮಾಳ್ ಪದವು ಮಜ್ಲಿಸ್ ಶಾಲೆಗಳಿಗೆ ಇಂದು (ಜುಲೈ 24) ರಜೆ ಘೋಷಣೆ ಮಾಡಿದ ಬಂಟ್ವಾಳ ತಾಲೂಕು ಆಡಳಿತ.
ಭಾರಿ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು (ಜು.24) ರಜೆ ಘೋಷಣೆ ಮಾಡಿದ ಕಡಬ ತಹಸೀಲ್ದಾರ್.