LATEST NEWS
ಕರಾವಳಿಯಲ್ಲಿ ಮತ್ತೆ ಕಾಣಿಸಿಕೊಂಡ ಮಳೆರಾಯ

ಕರಾವಳಿಯಲ್ಲಿ ಮತ್ತೆ ಕಾಣಿಸಿಕೊಂಡ ಮಳೆರಾಯ
ಮಂಗಳೂರು ಸೆಪ್ಟೆಂಬರ್ 27: ಕಳೆದ ಕೆಲವು ವಾರಗಳಿಂದ ಕಾಣಿಯಾಗಿದ್ದ ಮಳೆರಾಯ ಮತ್ತೆ ಕಾಣಿಸಿಕೊಂಡಿದ್ದಾನೆ. ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಭಾರೀ ಸಿಡಿಲಿನೊಂದಿಗೆ ತುಂತುರು ಮಳೆ ಸುರಿಯುತ್ತಿದೆ.
ನಿನ್ನೆ ರಾತ್ರಿಯಿಂದ ಆರಂಭವಾದ ಮಳೆ ಇಂದು ಬೆಳಗ್ಗೆ ಕೂಡ ಮುಂದುವರೆದಿದೆ. ಒಂದು ತಿಂಗಳಿಂದ ಪೂರ್ತಿ ಕರಾವಳಿಯಲ್ಲಿ ಮಳೆ ಮಾಯವಾಗಿತ್ತು. ಮಳೆ ಇಲ್ಲದೆ ಸುಡು ಬಿಸಿಲಿನಿಂದ ತತ್ತರಿಸದ್ದ ಜನತೆಗೆ ಮಳೆ ತಂಪೆರದಿದೆ.

ಈ ಮಧ್ಯೆ ಹವಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 27ರಿಂದ 30 ರ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಭಾರಿ ಅಲೆಗಳ ಅಬ್ಬರಿಸುವ ಸಾಧ್ಯತೆಗಳಿದ್ದು, ಒಂದೂವರೆ ಮೀಟರ್ ಎತ್ತರಕ್ಕೆ ಸಮುದ್ರದ ಅಲೆಗಳು ಅಪ್ಪಳಿಸುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಪಶ್ಚಿಮ, ಪೂರ್ವ ಕರಾವಳಿ ಮತ್ತು ಲಕ್ಷ ದ್ವೀಪ ಪ್ರದೇಶದಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದ್ದು ಈ ವೆಳೆಯಲ್ಲಿ ಸಮುದ್ರದಲ್ಲಿ ಮೀನುಗಾರರು ಬೋಟ್ ಚಲಾಯಿಸದಂತೆ ಸೂಚಿಸಲಾಗಿದೆ ಮತ್ತು ಬೀಚ್ ಗಳಲ್ಲಿ ಮನರಂಜನಾ ಆಟಗಳನ್ನು ರದ್ದುಪಡಿಸಲು ಭಾರತೀಯ ಸಾಗರ ಮಾಹಿತಿ ಕೇಂದ್ರ ಜಿಲ್ಲಾಡಳಿಕ್ಕೆ ಸೂಚನೆ ನೀಡಿದೆ.