LATEST NEWS
ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ ಹೊಸ್ಮಠ ಮತ್ತು ಬಿಳಿನೆಲೆ ಸೇತುವೆ ಮುಳುಗಡೆ
ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ ಹೊಸ್ಮಠ ಮತ್ತು ಬಿಳಿನೆಲೆ ಸೇತುವೆ ಮುಳುಗಡೆ
ಮಂಗಳೂರು ಆಗಸ್ಟ್ 08: ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ ಶುರವಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಸ್ನಾನ ಘಟ್ಟ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಸ್ನಾನ ಘಟ್ಟದಲ್ಲಿ ತೀರ್ಥಸ್ನಾನ ಮಾಡಲು ಸಾದ್ಯವಾಗದ ಪರಿಸ್ಥಿತಿ ಉಂಟಾಗಿದೆ. ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆ ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹೊಸ್ಮಠ ಸೇತುವೆಯೂ ನೀರಿನಿಂದ ಮುಳುಗಡೆಯಾಗಿದೆ.
ಇನ್ನೊಂದೆಡೆ ಬಿಳಿನೆಲೆ ಸೇತುವೆ ಮುಳುಗಡೆ ಯಾದ ಪರಿಣಾಮ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ನಡೆವೆ ಸಂಪರ್ಕ ಕಡಿತ ಗೊಂಡಿದೆ . ಬಿಳಿನೆಲೆ ಸೇತುವೆ ಮುಳುಗಡೆಯಾದ ಕಾರಣ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ರಸ್ತೆಯನ್ನು ತಾತ್ಕಾಲಿಕ ವಾಗಿ ಬಂದ್ ಮಾಡಲಾಗಿದ್ದು, ಸುಗಮ ಸಂಚಾರಕ್ಕೆ ನೀರಿನ ಮಟ್ಟ ಇಳಿಯುವವರೆಗೆ ಪ್ರಯಾಣಿಕರು ಕಾಯಲೇ ಬೇಕಾದ ಪರಿಸ್ಥಿತಿ ಇದೆ.