Connect with us

    DAKSHINA KANNADA

    ಮತ್ತೆ ಮಳೆ ಬಿರುಸು: ಕರಾವಳಿ-ಮಲೆನಾಡು ಸೇರಿ 5 ಜಿಲ್ಲೆಗಳಲ್ಲಿ 15ರಿಂದ ರೆಡ್​ ಅಲರ್ಟ್..!​

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮುಂಗಾರು ಬಿರುಸುಗೊಂಡಿದೆ. ಗುಜರಾತ್​ನಿಂದ ಕೇರಳದ ಉದ್ದಕ್ಕೂ ಸಮುದ್ರ ಮಟ್ಟದಲ್ಲಿ ದಟ್ಟ ತೇವಾಂಶ ಭರಿತ ಮೋಡಗಳಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆ.

    ಆದ್ದರಿಂದ ಕರ್ನಾಟಕದ ಕರಾವಳಿ , ಮಲೆನಾಡು ಸೇರಿ 5 ಜಿಲ್ಲೆಗಳಲ್ಲಿ ಭಾರಿ ಮಳೆಯ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜು.15, ಜು.16ರಂದು ಅತಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್​ ಅರ್ಲಟ್​ ಘೋಷಿಸಿದೆ.

    ಈ ಸಂದರ್ಭದಲ್ಲಿ 204 ಮಿಮೀ ಮಳೆ ಬೀಳುವುದನ್ನು ಇಲಾಖೆ ಅಂದಾಜಿಸಿದೆ. ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ಬೀಸುವ ಬಿರುಗಾಳಿ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧಿಸಲಿದೆ. ದಕ್ಷಿಣ ಕನ್ನಡದ ಮೂಲ್ಕಿಯಿಂದ ಮಂಗಳೂರಿನವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳವರೆಗೆ, ಉಡುಪಿಯ ಬೈಂದೂರಿನ ಕಾಪುವರೆಗೆ ಹೈ ವೇವ್​ ವಾಚ್​ ಅರ್ಲಟ್​ ನೀಡಲಾಗಿದೆ.

    ಸಮುದ್ರದಲ್ಲಿ 3 ಮೀಟರ್​ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಶಿವಮೊಗ್ಗದ ಆಗುಂಬೆ, ಕೊಡಗಿನ ಗೋಣಿಕೊಪ್ಪ, ಕಲಬುರಗಿ, ದಣ ಕನ್ನಡದ ಮಂಗಳೂರು ಮತ್ತು ಚಿಕ್ಕಮಗಳೂರಿನ ಮೂಡಗೆರೆ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply