DAKSHINA KANNADA
ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ಭರ್ಜರಿ ಮತಯಾಚನೆ- ವೇದವ್ಯಾಸ್

ಮಂಗಳೂರು, ಮೇ 06: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಡಿ. ವೇದವ್ಯಾಸ್ ಕಾಮತ್ ಅವರು ಹೊಯ್ಗೆ ಬಜಾರ್, ಜೆಪ್ಪು, ಕದ್ರಿ ದಕ್ಷಿಣ ಮತ್ತು ಬಿಜೈ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಮೊದಲ ಅವಧಿಯಲ್ಲಿ ನೀವು ಕೊಟ್ಟ ಜವಾಬ್ದಾರಿಯನ್ನು ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ನಿರ್ವಹಿಸಿ, ಮತ್ತೊಂದು ಅವಕಾಶಕ್ಕಾಗಿ ನಿಮ್ಮ ಮುಂದೆ ಬಂದಿದ್ದೇನೆ. ಭಾರತೀಯ ಜನತಾ ಪಾರ್ಟಿಗೆ ಈ ಬಾರಿಯೂ ಸರಳ ಬಹುಮತ ಬರಲಿದ್ದು ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.

ಸ್ಥಳೀಯ ಕಾರ್ಪೋರೇಟರ್, ಬಿಜೆಪಿ ಮುಖಂಡರು, ಮಹಿಳೆಯರು, ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.