Connect with us

    BELTHANGADI

    ಗಡಾಯಿಕಲ್ಲಿನಲ್ಲಿ ಭಾರೀ ಸ್ಫೋಟ: ಕುಸಿದು ಬಿದ್ದ ಬಂಡೆ

    ಬೆಳ್ತಂಗಡಿ, ಮೇ 02 : ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ನಡ ಗ್ರಾಮದ ಗಡಾಯಿಕಲ್ಲಿನಲ್ಲಿ ಇಂದು ಬೆಳಗ್ಗೆ ಭಾರೀ ಶಬ್ದದೊಂದಿಗೆ ಬಂಡೆಕಲ್ಲಿನ ಒಂದು ಭಾಗ ತುಂಡಾಗಿ ಕೆಳಗೆ ಕುಸಿದು ಬಿದ್ದಿದೆ.

     ನಿನ್ನೆ ರಾತ್ರಿ ಭಾರೀ ಮಳೆ ಸುರಿದಿರುವುದರಿಂದ ಸಿಡಿಲು ಹೊಡೆದು ಬಂಡೆ ತುಂಡಾಗಿ ಕೆಳಗೆ ಬಿದ್ದಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ವರ್ಷವು ಇದೇ ರೀತಿ ಬಂಡೆಯ ತುಂಡೊಂದು ಬಿದ್ದು ಜನರು ಆತಂಕ ಪಡುವಂತಾಗಿತ್ತು. ಈ ಬಾರಿಯ ಶಬ್ದವು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

    ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತಿದ್ದಾರೆ. ಸ್ಫೋಟದ ಶಬ್ದ ಸುಮಾರು 1 ಕಿ.ಮೀ ಗೂ ಹೆಚ್ಚು ದೂರ ಕೇಳಿಸಿದ್ದು, ಸುತ್ತಮುತ್ತಲಿನ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *