LATEST NEWS
ಉಡುಪಿಯಲ್ಲಿ ಭಾರಿ ಅವಾಂತರ ಸೃಷ್ಠಿಸಿದ ಸುಂಟರಗಾಳಿ ಮಳೆ

ಉಡುಪಿಯಲ್ಲಿ ಭಾರಿ ಅವಾಂತರ ಸೃಷ್ಠಿಸಿದ ಸುಂಟರಗಾಳಿ ಮಳೆ
ಉಡುಪಿ ಅಗಸ್ಟ್ 14: ಕರಾವಳಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕನೇ ದಿನದ ಮಳೆ ಭಾರೀ ಅವಾಂತರವನ್ನೆ ಸೃಷ್ಟಿಸಿದೆ.
ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸುಂಟರಗಾಳಿಗೆ ಬಹುತೇಕ ಮನೆಗಳ ಛಾವಣಿ ಹಾರಿಹೋಗಿದ್ದು ಕೆಲ ಮನೆಗಳ ಗೋಡೆ ಕುಸಿದುಹೋಗಿದೆ.

50ಕ್ಕೂ ಹೆಚ್ಚು ವಿದ್ಯುತ್ ಕಂಬ ಧಾರಾಶಾಹಿಯಾಗಿದ್ದು ಮಕ್ಕುಬುಲ್ ಎಂಬವರ ಮನೆ ಮೇಲೆ ಮರಬಿದ್ದು ಮನೆ ಜಖಂ ಗೊಂಡಿದ್ದು ೧೮ ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.
ಕುಕ್ಕುಂದೂರು ಗ್ರಾಮಪಂಚಾಯತ್ ಕಟ್ಟಡವೂ ಭಾಗಶಃ ಹಾನಿಯಾಗಿದ್ದು. ಜಯಂತಿನಗರದ ಶಾಲೆ ಕಟ್ಟಡ ಕುಸಿದುಹೋಗಿದೆ. ಇನ್ನು ಕಾರ್ಕಳ ತಾಲೂಕು ಕಚೇರಿ ಮೇಲೆ ಮರ ಉರುಳುವ ಜೊತೆಗೆ ಸಮೀಪದಲ್ಲಿದ್ದ ಸರ್ಕಾರಿ ವಾಹನದ ಮೇಲೂ ಮರದ ಕೊಂಬೆ ಬಿದ್ದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ.ಒಟ್ಟಾರೆ ನಿನ್ನೆ ತಡರಾತ್ರಿ ಬೀಸಿದ ಸುಂಟರಗಾಳಿ ಸಹಿತ ಮಳೆಗೆ ಕಾರ್ಕಳ ಅಸ್ತವ್ಯಸ್ತಗೊಂಡಿದೆ.