LATEST NEWS
ಬಿಸಿಲ ಬೇಗೆ – ಪುತ್ತೂರಿನಲ್ಲಿ 40 ಮಂಗಳೂರಿನಲ್ಲಿ 36.6 ಡಿಗ್ರಿ ಸೆಲ್ಸಿಯಸ್….!!
ಮಂಗಳೂರು ಮಾರ್ಚ್ 05: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಶನಿವಾರವೂ ಮುಂದುವರಿದಿದೆ. ಪುತ್ತೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ ದಾಖಲಾಗಿದೆ. ಮಧ್ಯಾಹ್ನದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೂರ್ಯ ನೆತ್ತಿಗೇರುತ್ತಿದ್ದಂತೆ ತಾಪಮಾನದ ಪ್ರಮಾಣವೂ ಹೆಚ್ಚಾಗುತ್ತಲೇ ಹೋಗಿತ್ತು. ಗಾಳಿಯೂ ಬಿಸಿಯಾಗಿ ಬೀಸಿದ್ದು, ಬಿಸಿಗಾಳಿಯಿಂದ ಜನರು ಸಂಕಷ್ಟ ಪಡುವಂತಾಯಿತು.
ಮಂಗಳೂರಿನಲ್ಲಿ ಗರಿಷ್ಠ 36.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಒಂದು ವಾರ ಕಾಲ ಉಷ್ಣಾಂಶದಲ್ಲಿ ಏರಿಕೆ ಕಂಡುಬರಲಿದ್ದು, ಬಳಿಕ ತುಸು ಇಳಿಕೆಯಾಗಲಿದೆ. ಮಾರ್ಚ್ 5ರಿಂದ ಮತ್ತೆ ಉಷ್ಣಾಂಶದಲ್ಲಿ ಇಳಿಕೆ ಕಂಡುಬರಲಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ. ತಾಪಮಾನದ ವೈಪರೀತ್ಯದಿಂದ ಪ್ರಸಕ್ತ ಬಿಸಿಲಿನ ಶಾಖ 32 ಡಿಗ್ರಿಯಿಂದ 40.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಸೂರ್ಯನ ಕಿರಣಗಳು ಸುಡುವಂತೆ ಭಾಸವಾಗುತ್ತಿದೆ.