KARNATAKA
ವಿಜಯಪುರ – ಡ್ಯಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನಪ್ಪಿದ ಯುವಕ

ವಿಜಯಪುರ ಮೇ 24: ಹೃದಯಾಘಾತ ಯಾವ ಸಂದರ್ಭದಲ್ಲಿ ಆಗಿತ್ತೆ ಎನ್ನುವುದೇ ಹೇಳುವುದಕ್ಕೆ ಆಗಲ್ಲ. ಸುಖ ದುಃಖದಲ್ಲಿ ಇರುವಾಗಲೇ ಹೃದಯಾಘಾತ ಸಂಭವಿಸುತ್ತೆ. ಇದಕ್ಕೆ ಪೂರಕವೆಂಬಂತೆ ಯುವಕನೋರ್ವ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ಈ ನಡೆದಿದೆ.
ಮಹಮ್ಮದ್ ಪೈಗಂಬರ್ ಗಂಗನಹಳ್ಳಿ (28) ಹಾರ್ಟ್ ಅಟ್ಯಾಕ್‌ನಿಂದ ಉಸಿರು ಬಿಟ್ಟ ನತದೃಷ್ಟ ಯುವಕ. ಮಹಮ್ಮದ್ ಪೈಗಂಬರ್ ತನ್ನ ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ. ಸ್ನೇಹಿತರ ಜೊತೆ ಸಂಗೀತಕ್ಕೆ ಸಖತ್ ಸ್ಟೆಪ್ಸ್ ಹಾಕುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಯುವಕ ಕುಸಿದು ಬಿದ್ದಿದ್ದು, ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಮೃತ ಮಹಮ್ಮದ್ ಪೈಗಂಬರ್ ಅವರು ವಿಜಯಪುರದಲ್ಲಿ ಅಲೋಮಿನಿಯಂ ಕಿಟಕಿ, ಬಾಗಿಲು ಕೆಲಸ ಮಾಡುತ್ತಿದ್ದ. ಮಹಮ್ಮದ್ ಪೈಗಂಬರ್ ಹೃದಯಾಘಾತ ಸ್ನೇಹಿತರು, ಸಂಬಂಧಿಕರು ಬೆಚ್ಚಿ ಬೀಳುವಂತೆ ಮಾಡಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮೃತ ಯುವಕ ಸಾವಿಗೂ ಮುನ್ನ ಖುಷಿಯಾಗಿ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.