LATEST NEWS
ಚಲಿಸುತ್ತಿದ್ದ ಸ್ಕೂಟರ್‌ನ ಹಿಂಬದಿ ಸವಾರ ಹೃದಯಾಘಾತದಿಂದ ಸಾವು

ಉಡುಪಿ ಮೇ 19: ಸ್ಕೂಟರ್ ನಲ್ಲಿ ಹಿಂಬದಿ ಕೂತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ ಸಾವನಪ್ಪಿರುವ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಮೇ18 ರಂದು ನಡೆದಿದೆ. ಮೃತರನ್ನು ಮಲ್ಪೆ ಕಂಬಳತೋಟ ನಿವಾಸಿ ಪ್ರತಾಪ್ (32) ಎಂದು ಗುರುತಿಸಲಾಗಿದ್ದು, ಇವರು ಮೀನುಗಾರಿಕಾ ವೃತ್ತಿ ನಡೆಸುತ್ತಿದ್ದಾರೆ.
ಮೇ 18 ರಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ಅಕ್ಕನ ಮಗನ ಸ್ಕೂಟರ್‌ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೋಗುತ್ತಿದ್ದ ವೇಳೆ ಅಸ್ವಸ್ಥಗೊಂಡ ಪ್ರತಾಪ್ ದಿಢೀರ್ ಕಿರಣ್ ಮೈಮೇಲೆ ಬಿದ್ದಿದ್ದರು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರತಾಪ್ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
