KARNATAKA
ಯಲಬುರ್ಗಾದಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ, ಮಗು ಸಾವು, ಹಲವಾರಿಗೆ ಗಾಯ..!
ಯಲಬುರ್ಗಾ, ಸೆ 02 : ಕೊಪ್ಪಳದ ಕುಕನೂರು-ಯಲಬುರ್ಗಾ ಮಾರ್ಗ ಮಧ್ಯೆ ನಡೆದ ಎರಡು ಕಾರುಗಳ ನಡುವಿನ ಅಪಘಾತದಲ್ಲಿ ಒಂದು ಮಗು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ತಾಲೂಕಿನ ಸಂಗನಾಳ ಹತ್ತಿರ ಸೇತುವೆ ಬಳಿ ಈ ಅಪಘಾತ ಸಂಭವಿಸಿದ್ದು ಸಂಪ್ರೀತ್ ಎಂಬ ಎರಡು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗದಗ ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಿಕೊಂಡು ವಾಪಸ್ಸು ಬರುತ್ತಿದ್ದ ಕಾರು ಹಾಗೂ ಚಿಕ್ಕೆನಕೊಪ್ಪದಿಂದ ಸಂಗನಾಳ ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಕೂಕನೂರು-ಯಲಬುರ್ಗಾ ಮಧ್ಯೆ ಬರುವ ಸಂಗನಾಳ ಗ್ರಾಮ ಬಳಿ ಸೇತುವೆ ಬಳಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಸಂಪ್ರೀತ್ ಸಂಗಯ್ಯ ಕೊರಗಲ್ ಮಠ(2) ಪುಟ್ಟ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಸಂಗನಾಳ ಗ್ರಾಮದ ದೇವಪ್ಪ ಗಡಾದ, ಪ್ರಭುದೇವ, ಶರಣಪ್ಪ ಹೊಸಂಗಡಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೊಪ್ಪಳದ ಮಹಾಲಕ್ಷ್ಮಿ ವೀರುಪಾಕ್ಷಯ್ಯ ಕೊರಗಲ್ ಮಠ ಸೇರಿದಂತೆ ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪ್ರಕರಣ ದಾಖಲಿಸಿ ಕೊಂಡು ಪೋಲಿಸ್ ತನಿಖೆ ಮುಂದುವರಿಸಿದೆ.
Continue Reading
Advertisement
Click to comment