LATEST NEWS
He Might have cross Line ಅದಕ್ಕೆ ಪ್ರವೀಣ್ ನಂಬರ್ ಬ್ಲಾಕ್ ಮಾಡಿದ್ಲು – ಐನಾಝ್ ಸಹೋದರ
ಉಡುಪಿ ನವೆಂಬರ್ 17 : ಉಡುಪಿಯ ನೇಜಾರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೆ ಮಾಹಿತಿಗಳು ಹೊರ ಬರುತ್ತಿದೆ. ಈ ನಡುವೆ ಕೊಲೆಗೆ ಸಂಬಂಧಿಸಿದಂತೆ ಮೃತರ ಸಂಬಂಧಿಕರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಎರ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಐನಾಝ್ ಸಹೋದರ ಮಾಧ್ಯಮಗಳ ಜೊತೆ ಮಾತನಾಡಿದ ಆರೋಪಿ ಪ್ರವೀಣ್ ಚೌಗುಲೆ ಐನಾಝ್ ಗೆ ಕಿರುಕುಳ ನೀಡುತ್ತಿದ್ದು ಹೀಗಾಗಿ ಆತನ ಮೊಬೈಲ್ ನಂಬರನ್ನು ಬ್ಲಾಕ್ ಮಾಡಿ ಇಟ್ಟಿದ್ದಳು. ಆದರೆ ಆತನ ಕಿರುಕುಳದ ಬಗ್ಗೆ ಮನೆಯಲ್ಲೂ ಕೂಡ ಹೇಳಿರಲಿಲ್ಲ. ಈ ವಿಚಾರ ಹೇಳುತ್ತಿದ್ದರೆ ತಂದೆ ಅವಳನ್ನು ಕೆಲಸಕ್ಕೆ ಹೋಗಬೇಡ ಎನ್ನುತ್ತಾರೆಂಬ ಭಯ ಅವಳಿಗೆ ಇತ್ತು ಎಂದು ಮೃತ ಐನಾಝ್ ಸಹೋದರ ಅಸಾದ್ ಹೇಳಿದರು.
ಅಲ್ಲದೆ ಅವರು ರಾಜ್ಯದಲ್ಲಿ ಮಹಿಳೆಯರು ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ. ಆದುದರಿಂದ ಅವರಿಗೆ ಭದ್ರತೆ ಬೇಕು. ಅವರಿಗೆ ಯಾರಾದರೂ ಕಿರುಕುಳ ನೀಡಿದರೆ ಮಾಹಿತಿ ಕೊಡುವ ವ್ಯವಸ್ಥೆ ಬರಬೇಕು. ಹಿಂದೂ ಮುಸ್ಲಿಂ ಎಲ್ಲ ಮಹಿಳೆಯರಿಗೂ ಭದ್ರತೆ ಬೇಕು ಎಂದು ಆಗ್ರಹಿಸಿದರು. ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ ಇದ್ದರೆ ಮಹಿಳೆಯರು ಹೇಳಿ ಕೊಳ್ಳುವುದಿಲ್ಲ. ಆದುದರಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯರಿಗೆ ಅವಕಾಶ ಸಿಗಬೇಕು. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಮಹಿಳಾ ಸೆಲ್ ಸ್ಥಾಪಿಸಬೇಕು ಮತ್ತು ಅದನ್ನು ಬಲಿಷ್ಠ ಮಾಡಬೇಕು. ಮಹಿಳೆಯರು ಮನೆಯಲ್ಲಿ ಕುಳಿತು ಕೊಳ್ಳುವುದು, ಮದುವೆಯಾಗುವುದು ಮಾತ್ರ ಅಲ್ಲ. ಕೆಲಸ ಮಾಡುವ ಅವಕಾಶ ಮಾಡಬೇಕು ಎಂದು ಅವರು ತಿಳಿಸಿದರು.