Connect with us

    DAKSHINA KANNADA

    ದಕ್ಷಿಣ ಕನ್ನಡದಲ್ಲಿ ಕಡಿಮೆಯಾದ ಮಳೆ ಅಬ್ಬರ, ಗಿರಿಶಿಖರಗಳ ಚಾರಣ ನಿಷೇಧ ಆದೇಶ ಹಿಂಪಡೆದ ಜಿಲ್ಲಾಡಳಿತ..! 

    ಮಂಗಳೂರು,ಆಗಸ್ಟ್.17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ತಗ್ಗಿದ ಕಾರಣ ಗಿರಿಶಿಖರಗಳ ಚಾರಣ ನಿಷೇಧ ಆದೇಶ ಜಿಲ್ಲಾಡಳಿತ ಹಿಂಪಡೆದಿದೆ.

    2024-25ನೇ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಭೂಕುಸಿತ, ಗುಡ್ಡ ಕುಸಿತ, ಸಿಡಿಲು ಬಡಿತ, ಮರ ಬೀಳುವಂತಹ ದುರ್ಘಟನೆಗಳು ನಡೆಯುವ ಆತಂಕವಿದ್ದ ಕಾರಣ  ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ಜಿಲ್ಲೆಯಲ್ಲಿ ಗಿರಿತಾಣ/ಶಿಖರಗಳ ಚಾರಣವನ್ನು (ಟ್ರೆಕ್ಕಿಂಗ್) ಮತ್ತು ಹೋಮ್ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರೆಕ್ಕಿಂಗ್, ಸಾಹಸ ಚಟುವಟಿಕೆ ಇತ್ಯಾದಿ ಚಟುವಟಿಕೆಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದರೆ ಇದೀಗ ಅಂತಹ ವಾತಾವರಣ ಇಲ್ಲದಿರುವ ಕಾರಣ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಬಂಧನೆಗೊಳಪಟ್ಟು ಈ ಆದೇಶವನ್ನು ತಕ್ಷಣದಿಂದ ಹಿಂಪಡೆಯಲಾಗಿದೆ. ಈ ಬಗ್ಗೆ  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    1 Comment

    1 Comment

    1. Pingback: ಮಂಗಳೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರ ಆಯ್ಕೆಗೆ ಆನ್‍ಲೈನ್ ಅರ್ಜಿ ಆಹ್ವಾನ - themangaloremirror.in

    Leave a Reply

    Your email address will not be published. Required fields are marked *