Connect with us

    LATEST NEWS

    ಸಿಎಂ ಕುಮಾರಸ್ವಾಮಿ ಪರ ವಸತಿ ಸಚಿವ ಯು.ಟಿ ಖಾದರ್ ಬ್ಯಾಟಿಂಗ್

    ಸಿಎಂ ಕುಮಾರಸ್ವಾಮಿ ಪರ ವಸತಿ ಸಚಿವ ಯು.ಟಿ ಖಾದರ್ ಬ್ಯಾಟಿಂಗ್

    ಉಡುಪಿ ಅಗಸ್ಟ್ 28: ಮುಖ್ಯಮಂತ್ರಿ ಎಚ್ ಡಿ ಕುಮಾರ್ ಸ್ವಾಮಿ ಪರ ವಸತಿ ಸಚಿವ ಯು,ಟಿ ಖಾದರ್ ಬ್ಯಾಟಿಂಗ್ ಮಾಡಿದ್ದಾರೆ. ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಅಲ್ಲದೇ ಈಗ ಮುಖ್ಯಮಂತ್ರಿಯಾಗಲು ಯಾರಿದ್ದಾರೆ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕುಮಾರಸ್ವಾಮಿಯವರ ಹೆಸರು ಹೇಳದೆ ವಸತಿ, ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಗ್ರೆಸ್ ಪಕ್ಷ ಜೆಡಿಎಸ್ ಗೆ ಬೇಷರತ್ ಬೆಂಬಲ ಕೊಟ್ಟಿದೆ. ಆದ್ದರಿಂದ 5 ವರ್ಷ ಸರ್ಕಾರ ಸುಭದ್ರವಾಗಿರುತ್ತದೆ ಇದರಲ್ಲಿ ಯಾವುದೇ ಅನುಮಾನ ಬೇಡ. ಜೆಡಿಎಸ್ ನೇತೃತ್ವ- ಕಾಂಗ್ರೆಸ್ ಬೆಂಬಲದಲ್ಲಿ ಸರ್ಕಾರದ ಸುಭದ್ರವಾಗಿದೆ ಎಂದು ಹೇಳಿದರು.

    ಸಿಎಂ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಮನಸ್ತಾಪ ಇಲ್ಲ.ಸಮನ್ವಯ ಸಮಿತಿ ಸಭೆ ಕರೆಯದಿರುವುದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ‌ ಕಾಂಗ್ರೆಸ್ ಗೆ ಗೆಲುವು ನಿಶ್ಚಿತ. ಬಿಜೆಪಿಗರ ಸುಳ್ಳು ಅಪಪ್ರಚಾರಕ್ಕೆ ಸೋಲಾಗಲಿದೆ ಎಂದು ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *