KARNATAKA
ಆಶ್ವಾಸನೆಗಳಿಂದ ನುಣುಚಿಕೊಳ್ಳಲು ರಾಜೀನಾಮೆ ಹೇಳಿಕೆ – ಬಿ.ಜೆ ಪುಟ್ಟಸ್ವಾಮಿ
ಆಶ್ವಾಸನೆಗಳಿಂದ ನುಣುಚಿಕೊಳ್ಳಲು ರಾಜೀನಾಮೆ ಹೇಳಿಕೆ – ಬಿ.ಜೆ ಪುಟ್ಟಸ್ವಾಮಿ
ಉಡುಪಿ ಜನವರಿ 28: ದೇಶದಲ್ಲಿ ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳು ಮಾಡಿಕೊಂಡಿರುವ ಘಟಬಂಧನ್ ನೀತಿ ನಿಯಮ ಇಲ್ಲದ ಅನೈತಿಕ ಬಂದನ್ ಆಗಿದ್ದು, ಇದು ದೇಶದ ಭವಿಷ್ಯಕ್ಕೆ ಮಾರಕ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಜ್ಯಾಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಎಚ್ ಡಿಕೆ ರಾಜ್ಯದ ಸಾಂದರ್ಭಿಕ ಸಿಎಂ ಆಗಿದ್ದು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ದೇವೇಗೌಡರಿಗೆ ಶರಣಾಗಿದೆ. ದೇವೆಗೌಡರು 2 ರಿಂದ 10 ಸೀಟು ವಿಸ್ತರಣೆ ಮಾಡೋದ್ರಲ್ಲಿ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ತುಟಿಗೆ ತುಪ್ಪಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಕುಮಾರ ಸ್ವಾಮಿ ರಾಜೀನಾಮೆ ಹೇಳಿಕೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ರಾಜಿನಾಮೆಗೆ ಸದಾ ಸಿದ್ದರಾಗಿರ್ತಾರೆ, ಎಲ್ಲಾ ಆಶ್ವಾಸನೆಗಳಿಂದ ನುಣಿಚಿಕೊಳ್ಳಲು ಸಿಎಂ ರಾಜೀನಾಮೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ವಿಪಕ್ಷಗಳು ಮಾಡಿಕೊಂಡಿರುವ ಮೈತ್ರಿಯಿಂದ ದೇಶ ಕಾಪಾಡಲು ಸಾಧ್ಯವಿಲ್ಲ, ಈಗ ಮಾಡಿಕೊಂಡಿರುವ ಘಟ ಬಂಧನದ ಪ್ರಧಾನಿ ಅಭ್ಯರ್ಥಿ ಯಾರು? ಎನ್ನುವುದೇ ಗೊತ್ತಿಲ್ಲ, ಅವರ ಈ ಘಟ್ ಬಂಧನ ದೇಶದ ಭವಿಷ್ಯಕ್ಕೆ ಮಾರಕ ಎಂದು ಹೇಳಿದರು.