DAKSHINA KANNADA
ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐ ಅಲ್ಲಾ ಅಂತರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ -ಹೆಚ್ ಡಿಕೆ

ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐ ಅಲ್ಲಾ ಅಂತರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ -ಹೆಚ್ ಡಿಕೆ
ಪುತ್ತೂರು ಅಗಸ್ಟ್ 18: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಅಲ್ಲಾ ಯಾವ ಅಂತರಾಷ್ಟ್ರೀಯ ಮಟ್ಟದ ತನಿಖೆ ಸಂಸ್ಥೆಯಿಂದಾದರೂ ತನಿಖೆ ಮಾಡಲಿ ಜೆಡಿಎಸ್ ಪಕ್ಷ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ಅರು ಫೊನ್ ಕದ್ದಾಲಿಕೆಯ ಪ್ರಕರಣವನ್ನು ಸಿಬಿಐ ಗೆ ತನಿಖೆ ನಡೆಸಲು ಮುಂದಾಗಿರುವ ಕುರಿತ ಪ್ರತಿಕ್ರಿಯಿಸಿದ ಅವರು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ದ ಹರಿಹಾಯ್ದರು, ಫೋನ್ ಕದ್ದಾಲಿಕೆ ವಿಚಾರದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳು ನನ್ನನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದು, ನನ್ನ ಮತ್ತು ರಾಜ್ಯದ ಜನತೆಯ ನಡುವೆ ಅವಿಶ್ವಾಸ ಮೂಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ನಾನು ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್ ಮೀಡಿಯಾಗಳ ಒತ್ತಡಕ್ಕೆ ಬಗ್ಗಲ್ಲ, ಮಾಧ್ಯಮಗಳು ಏನು ಬೇಕಾದರೂ ತೋರಿಸಲಿ, ಮಾಧ್ಯಮಗಳು ಫೋನ್ ಕದ್ದಾಲಿಕೆಯ ಸ್ಟೋರಿ ಮಾಡಿ ಬಿಲ್ಡಪ್ ತಗಳೋ ಪ್ರಯತ್ನದಲ್ಲಿದೆ ಆದರೆ ಇದರಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಯಶಸ್ವಿಯಾಗಲ್ಲ ಎಂದು ಟಿವಿ ಮಾಧ್ಯಮಗಳ ಮೇಲೆ ಹರಿಹಾಯ್ದರು.
ಸಚಿವ ಸ್ಥಾನದ ವಿಷಯದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಟೋಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ ಅವರು ಸಚಿವ ಸಂಪುಟದ ಬಗ್ಗೆ ಚರ್ಚೆಯನ್ನೂ ನಡೆಸುವುದಿಲ್ಲ, ರಾಜ್ಯದಲ್ಲಿ ಇದೀಗ ಕೆಟ್ಟ ಪರಿಸ್ಥಿತಿಯಿದೆ, ಜನತೆಗೆ ಸರಕಾರದಿಂದ ಹಲವು ನಿರೀಕ್ಷೆಯಿದೆ, ಜನರ ಹಿತಕ್ಕೆ ಪೂರಕವಾಗಿ ಸರಕಾರ ಕೆಲಸ ಮಾಡಬೇಕು, ಸರಕಾರ ಉಳಿಯುತ್ತೋ, ಬೀಳುತ್ತೋ ಹೇಳೋಕಾಗಲ್ಲ, ಸದ್ಯದ ಪರಿಸ್ಥಿತಿ ನಿವಾರಣೆಯ ದೃಷ್ಟಿಯಲ್ಲಿ ನಾನು ಸರಕಾರದ ಜೊತೆಗಿದ್ದೇವೆ ಎಂದರು.