KARNATAKA
ಹಾವೇರಿ – ಬೈಕ್ ಗೆ ಲಾರಿ ಡಿಕ್ಕಿ ಅಪ್ಪಅಮ್ಮನ ಜೊತೆ 6 ವರ್ಷದ ಮಗನ ಧಾರುಣ ಸಾವು…!!

ಹಾವೇರಿ ಫೆಬ್ರವರಿ 27: ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಸಾವನಪ್ಪಿ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡ ಘಟನೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ನಡೆದಿದೆ.
ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬೈಕ್‌ಗೆ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹಾವೇರಿಯ ನಾಗೇಂದ್ರನಮಟ್ಟಿ ನಿವಾಸಿಗಳಾದ ಆಸೀಫ್‌ವುಲ್ಲಾ ಮಲ್ಲಾಡದ (34) ಮತ್ತು ಅಫ್ರಿನ್‌ಬಾನು ಮಲ್ಲಾಡದ (27) ದಂಪತಿ ಹಾಗೂ ಇವರ 6 ವರ್ಷದ ಪುತ್ರ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಹೆಣ್ಣುಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಡಗಿ ತಾಲ್ಲೂಕಿನ ಶಿಡೇನೂರಿನಿಂದ ಹಾವೇರಿ ನಗರಕ್ಕೆ ಬೈಕ್‌ನಲ್ಲಿ ಆಸೀಫ್‌ವುಲ್ಲಾ ಕುಟುಂಬದ ನಾಲ್ವರು ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ.
