Connect with us

  FILM

  `ಜವಾನ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ!

  `ಪಠಾಣ್’ ಸಿನಿಮಾದ ಸಕ್ಸಸ್ ನಂತರ ಶಾರುಖ್‌ಗೆ ಇದೀಗ ಗೆಲುವಿನ ಸರದಾರ ಶಿವರಾಜ್‌ಕುಮಾರ್ ಸಾಥ್ ನೀಡುತ್ತಿದ್ದಾರೆ. ಬಾಲಿವುಡ್ ಎಸ್‌ಆರ್‌ಕೆ ಜೊತೆ ಸ್ಯಾಂಡಲ್‌ವುಡ್ ಎಸ್‌ಆರ್‌ಕೆ ಜೊತೆಯಾಗುತ್ತಿದ್ದಾರೆ. ಇಂತಹದೊಂದು ಸುದ್ದಿ ಸಿನಿನಗರಿಯಲ್ಲಿ ಹರಿದಾಡುತ್ತಿದೆ.

  ಶಾರುಖ್ ಖಾನ್ ಸದ್ಯ `ಜವಾನ್’ ಪ್ರಾಜೆಕ್ಟ್ ಕಡೆ ಗಮನ ಕೊಡುತ್ತಿದ್ದಾರೆ. `ಜವಾನ್’ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಎಂಟ್ರಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಗೌರಿ ಖಾನ್ ನಿರ್ಮಾಣದ ಈ ಚಿತ್ರದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರನ್ನ ಈ ಚಿತ್ರದಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಸ್ಟಾರ್ ಕಲಾವಿದರ ದಂಡೇ ಈ ಚಿತ್ರದಲ್ಲಿ ಇರಲಿದೆ. ಜವಾನ್‌ಗೆ ನಾಯಕಿಯಾಗಿ ನಯನತಾರಾ  ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕನ್ನಡದಿಂದ ಸೆಂಚುರಿ ಸ್ಟಾರ್ ಶಿವಣ್ಣಗೆ ಚಿತ್ರದಲ್ಲಿ ನಟಿಸಲು ಶಾರುಖ್ ಟೀಂ ಅಪ್ರೋಚ್ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಈಗಾಗಲೇ ಶಿವಣ್ಣ ರಜನೀಕಾಂತ್ ಜೊತೆ `ಜೈಲರ್’ನಲ್ಲಿ ನಟಿಸಿ ಬಂದಿದ್ದಾರೆ. ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸಲು ಶಿವಣ್ಣ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಶಾರುಖ್ ಖಾನ್ ಚಿತ್ರದಲ್ಲಿ ಶಿವಣ್ಣ ನಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಅಧಿಕೃತ ಅಪ್‌ಡೇಟ್‌ಗಾಗಿ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

  Share Information
  Advertisement
  Click to comment

  You must be logged in to post a comment Login

  Leave a Reply