KARNATAKA
ಹಾಸನ – ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು…!!

ಹಾಸನ ಫೆಬ್ರವರಿ 26: ದ್ವಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನಪ್ಪಿರುವ ಘಟನೆ ತಿಪಟೂರು ಮುಖ್ಯ ರಸ್ತೆಯ ನವಿಲೇ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ತಿಪಟೂರು ತಾಲೂಕಿನ ಎಡಗರಹಳ್ಳಿ ಗ್ರಾಮದ ಯೋಗೇಶ್ ಆಚಾರಿ (35) ಅವರ ಪತ್ನಿ ಲಕ್ಷ್ಮಿ(27) ಹಾಗೂ ಯೋಗೇಶ್ ಆಚಾರಿ ತಂಗಿಯ ಮಕ್ಕಳಾದ ಗಾನವಿ(12) ತೇಜು(4) ಎಂದು ಗುರುತಿಸಲಾಗಿದೆ. ಡೀಸೆಲ್ ಖಾಲಿಯಾದ ಹಿನ್ನೆಲೆಯಲ್ಲಿ ಟ್ಯಾಕ್ಟರ್ ಅನ್ನು ಚಾಲಕ ಅಜಾಗರೂಕತೆಯಿಂದ ನಡು ರಸ್ತೆಯ ಮೇಲೆ ಬಿಟ್ಟು ಹೋಗಿದ್ದರಿಂದ ಈ ಅಪಘಾತ ನಡೆದಿದೆ. ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
