LATEST NEWS
ಇನ್ನೊಂದು ನಿರ್ಭಯ ಪ್ರಕರಣ :ಹರಿಯಾಣದಲ್ಲಿ 10 ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹಿಂಸೆ ನೀಡಿ ಬರ್ಬರ ಕೊಲೆ
ಇನ್ನೊಂದು ನಿರ್ಭಯ ಪ್ರಕರಣ :ಹರಿಯಾಣದಲ್ಲಿ 10 ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹಿಂಸೆ ನೀಡಿ ಬರ್ಬರ ಕೊಲೆ
ಹರಿಯಾಣ,ಜನವರಿ 15 : ಹರಿಯಾಣದ ಜಿಂದ್ ನಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ ನಡೆದಿದೆ.
ಹತ್ತನೇ ತರಗತಿಯ ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯ ದೇಹವನ್ನು ಛಿದ್ರಗೊಳಿಸಿ ಬೀಸಾಡಿದ ಅತ್ಯಮಾನುಷ ಘಟನೆ ವರದಿಯಾಗಿದೆ.
ತನಗಾದ ಮಾರಣಾಂತಿಕ ಗಾಯಗಳಿಂದ ಬಾಲಕಿಯು ದಾರುಣ ಸಾವನ್ನು ಕಂಡಿದ್ದಾಳೆ.
ಇದು 2012ರ ದಿಲ್ಲಿಯ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಪುನರಾವರ್ತನೆಯಾಗಿದೆ.
ಪ್ರಾರ್ಥಮಿಕ ತನಿಖೆಯ ಪ್ರಕಾರ ಬಾಲಕಿಯ ಮೇಲೆ ಅತ್ಯಾಚಾರ ನಡಸಿದ ಬಳಿಕ ಆಕೆಯ ಗುಪ್ತಾಂವನ್ನು ಛಿದ್ರಗೊಳಿಸಲಾಗಿದೆ.
ಆಕೆಯ ದೇಹದಲ್ಲಿ ಹಲವಾರು ಗಾಯಗಳು ಕಂಡು ಬಂದಿವೆ. ಆಕೆಯ ಮೇಲೆ ಕನಿಷ್ಠ 3ರಿಂದ 4 ಮಂದಿ ಕಾಮುಕರು ಸೇರಿ ಲೈಂಗಿಕ ದೌರ್ಜನ್ಯದೊಂದಿಗೆ ಚಿತ್ರ ಹಿಂಸೆ ನೀಡಿರುವುದು ಆಕೆಯ ದೇಹದ ಮೇಲಿನ ಗಾಯಗಳಿಂದ ಧೃಡ ಪಟ್ಟಿದೆ.
ಆಕೆಯ ಗುಪ್ತಾಂಗದೊಳಗೆ ವಿಕೃತ ಕಾಮುಕರು ಯಾವುದೊಂದು ಒಂದು ಗಟ್ಟಿ ವಸ್ತುವನ್ನು ತುರುಕಿದ್ದಾರೆ. ಆಕೆಯನ್ನು ನೀರಲ್ಲಿ ಮುಳುಗಿಸಿ ತೆಗೆದಿರುವ ಕುರುಹು ಕೂಡ ಕಂಡು ಬಂದಿದೆ.
ಪೊಲೀಸರು ಐಪಿಸಿ ಸೆ.302ರ ಪ್ರಕಾರ ಕೊಲೆ ಕೇಸನ್ನು ದಾಖಲಿಸಿಕೊಂಡಿದ್ದಾರೆ.
ಎರಡು ವಿಶೇಷ ತನಿಖಾ ತಂಡಗಳನ್ನು ರೂಪಿಸಿಲಾಗಿದೆ ಎಂದು ಡಿವೈಎಸ್ಪಿ ಕಪ್ತಾನ್ ಸಿಂಗ್ ತಿಳಿಸಿದ್ದಾರೆ.
You must be logged in to post a comment Login