Connect with us

    KARNATAKA

    ಬೆಂಗಳೂರು : ಜೀವಹಾನಿಯ ಗಾಳಿಪಟ ‘ಮಾಂಜಾ ದಾರ’ ನಿಷೇಧಿಸಿದ ರಾಜ್ಯ ಸರ್ಕಾರ..!!

    ಬೆಂಗಳೂರು: ಮಾನವ ಸೇರಿ ಜೀವ ಸಂಕುಲಕ್ಕೆ ಪ್ರಾಣ ಹಾನಿ ಮಾಡುವ  ಗಾಳಿಪಟಕ್ಕೆ ಬಳಸುವ ‘ಮಾಂಜಾ ದಾರ’ ವನ್ನು ಕರ್ನಾಟಕ ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ.

    ಪ್ರಾಣಿಪ್ರಿಯರ ಸಲಹೆಗಳನ್ನು ಸ್ವೀಕರಿಸಿ, ಮಾನವರು, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯನ್ನು ತಡೆಯಲು ಗಾಳಿಪಟ ಹಾರಿಸಲು ಬಳಸುವ ಲೋಹ ಅಥವಾ ಗಾಜಿನ ಲೇಪಿತ ದಾರ ಅಥವಾ ಮಾಂಜಾದಾರ ಬಳಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.  ಪರಿಸರ (ಸಂರಕ್ಷಣೆ) ಕಾಯಿದೆ (ಇಪಿಎ), 1986 ರ ಸೆಕ್ಷನ್ 5 ರ ಅಡಿಯಲ್ಲಿ ಸರ್ಕಾರವು ತನ್ನ ಅಧಿಸೂಚನೆಗೆ ತಿದ್ದುಪಡಿಯನ್ನು ತಂದು ಆದೇಶ ಹೊರಡಿಸಿದ್ದು, ಈಗ “ಯಾವುದೇ ಚೂಪಾದ, ಲೋಹೀಯ ಅಥವಾ ಗಾಜಿನ ಪುಡಿ, ಅಂಟುಗಳು ಅಥವಾ ಇತರ ಯಾವುದೇ ವಸ್ತುಗಳು ಅಂದರೆ ದಾರವನ್ನು ಬಲಪಡಿಸುವ ಸಾಮಗ್ರಿ ಲೇಪಿತ ಮಾಂಜಾದಾರವನ್ನು ನಿಷೇಧಿಸಲಾಗಿದೆ.

    ಗಾಜಿನಪುಡಿ ಅಥವಾ ಲೋಹೀಯ ಘಟಕ ರಹಿತ ದಾರವನ್ನು ಮಾತ್ರ ಗಾಳಿಪಟ ಹಾರಿಸಲು ಅನುಮತಿಸಲಾಗಿದೆ. ಈ ಹಿಂದೆ ನೈಲಾನ್ “ಚೈನೀಸ್” ಮಾಂಜಾಗೆ ಮಾತ್ರ ಸೀಮಿತವಾಗಿದ್ದ ನಿಷೇಧವನ್ನು ಗಾಜಿನ ಅಥವಾ ಲೋಹದ ಪುಡಿ ಲೇಪಿತ ದಾರಗಳಿಗೂ ನಿಷೇಧ ಅನ್ವಯಿಸಲು ಸರ್ಕಾರ ಅಧಿಸೂಚನೆ ಮೂಲಕ ತಿಳಿಸಿದೆ.

    ಇದೇ ವರ್ಷ, ಮಹಾರಾಷ್ಟ್ರದಲ್ಲಿ 21 ವರ್ಷದ ವ್ಯಕ್ತಿ ಇದೇ ಮಾಂಜಾದಾರ ಕತ್ತಿಗೆ ಸಿಲುಕಿ ಕೊಯ್ದು ಸಾವನ್ನಪ್ಪಿದ್ದರು. ಅಂತೆಯೇ ಗುಜರಾತ್‌ನಲ್ಲಿ ನಾಲ್ವರು, ಮಧ್ಯಪ್ರದೇಶದಲ್ಲಿ ಚಿಕ್ಕ ಹುಡುಗ ಮತ್ತು ರಾಜಸ್ಥಾನದಲ್ಲಿ 12 ವರ್ಷದ ಬಾಲಕನ ಕತ್ತು ಇದೇ ಮಾಂಜಾದಾರದಿಂದ ಕತ್ತರಿಸಿ ಹೋಗಿತ್ತು. ಹಾನಿಕಾರಕ ಮಾಂಜಾದಾರದ ಎಳೆಗಳು ಪಕ್ಷಿಗಳ ಜನಸಂಖ್ಯೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಮಾಂಜಾ ದಾರ ಆಗಾಗ್ಗೆ ಪಕ್ಷಿಗಳ ರೆಕ್ಕೆಗಳನ್ನು, ಪಾದಗಳನ್ನು ಕತ್ತರಿಸುತ್ತದೆ. ಅನೇಕ ಪ್ರಕರಣಗಳಲ್ಲಿ ಪಕ್ಷಿಗಳು ಇಂತಹ ತೀವ್ರವಾದ ಗಾಯಗಳಿಗೆ ತುತ್ತಾಗಿ ನೆಲಕ್ಕೆ ಅಪ್ಪಳಿಸಿರುವ ಪ್ರಕರಣಗಳೂ ವರದಿಯಾಗಿವೆ.

    ಗಾಜಿನ ಪುಡಿ ಲೇಪಿತ ಮಾಂಜಾದಾರ ನಿಷೇಧವನ್ನು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಇಂಡಿಯಾ ಸ್ವಾಗತಿಸಿದ್ದು, ಮಾಂಜಾದಿಂದ ಉಂಟಾದ ಪಕ್ಷಿ ಮತ್ತು ಮಾನವ ಸಾವುಗಳ ತಡೆಯಲು ತಾವು ಮಾಡಿದ್ದ ಮನವಿಯನ್ನು ಅನುಸರಿಸಿ ಕರ್ನಾಟಕ ಸರ್ಕಾರವು ತಿದ್ದುಪಡಿ ಮಾಡಿದೆ ಎಂದು ಹೇಳಿದೆ. ನೈಲಾನ್ ಮಾಂಜಾ ಜೊತೆಗೆ ಗಾಜು ಮತ್ತು ಲೋಹದಿಂದ ಬಲಪಡಿಸಲಾದ ಗಾಳಿಪಟದ ದಾರಗಳಿಂದ ಉಂಟಾಗುವ ಅಪಾಯಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳನ್ನು ನಾವು ಪ್ರಶಂಸಿಸುತ್ತೇವೆ” ಎಂದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *