BELTHANGADI
ವಿದ್ಯಾರ್ಥಿನಿಗೆ ಕಿರುಕುಳ : ಮೂವರ ವಿರುದ್ಧ ಪೋಕ್ಸೊ ಪ್ರಕರಣ

ವಿದ್ಯಾರ್ಥಿನಿಗೆ ಕಿರುಕುಳ : ಮೂವರ ವಿರುದ್ಧ ಪೋಕ್ಸೊ ಪ್ರಕರಣ
ಬೆಳ್ತಂಗಡಿ , ಡಿಸೆಂಬರ್ 17 : ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಮೂವರು ಯುವಕರ ವಿರುದ್ಧ ಧರ್ಮಸ್ಥಳ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ಪ್ರೌಢ ಶಾಲಾ ವಿದ್ಯಾರ್ಥಿನಿ ಬಸ್ಸಿನಿಂದ ಇಳಿದು ತನ್ನ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಕಕ್ಕಿಂಜೆಯ ಗಾಂಧಿನಗರದ ತಮೀಮ್, ತನ್ವೀರ್, ಇರ್ಫಾನ್ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ.

ವಾಪಸ್ ಪೇಟೆಗೆ ಬರುತ್ತಿರುವಾಗಲೂ ಆರೋಪಿಗಳು ಬೈಕಿನಲ್ಲಿ ಬಂದು ಅಡ್ಡಗಟ್ಟಿ ಬಾಲಕಿಯ ಸಮವಸ್ತ್ರದ ಶಾಲನ್ನು ಹಿಡಿದು ಎಳೆದು ಜೊತೆಯಲ್ಲಿ ಬರಬೇಕು ಬೆದರಿಸಿದ್ದರು.
ಈ ಬಗ್ಗೆ ಧರ್ಮಸ್ಥಳ ಠಾಣೆಗೆ ವಿದ್ಯಾರ್ಥಿನಿ ಹಾಗೂ ಮನೆಯವರು ದೂರು ನೀಡಿದ್ದು ಅರೋಪಿಗಳ ವಿರುದ್ದ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.