LATEST NEWS
ಅಸ್ವಸ್ಥ ವಿದ್ಯಾರ್ಥಿನಿಯ ಜೀವ ರಕ್ಷಣೆಗಾಗಿ 6 ಗಂಟೆಯಲ್ಲಿ 400 ಕಿ.ಮೀ ಯಾನ..!
ಅಸ್ವಸ್ಥ ವಿದ್ಯಾರ್ಥಿನಿಯ ಜೀವ ರಕ್ಷಣೆಗಾಗಿ 6 ಗಂಟೆಯಲ್ಲಿ 400 ಕಿ.ಮೀ ಯಾನ..!
ಕಾಸರಗೋಡು,ಡಿಸೆಂಬರ್ 17 : ಕರುಳು ಸಂಬಂಧಿ ಸಮಸ್ಯೆಯಿಂದ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬರನ್ನು ರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 400 ಕಿಲೋ ಮೀಟರ್ ದೂರದ ಕೇರಳದ ಎರ್ನಾಕುಲಂ ಆಸ್ಪತ್ರೆಗೆ ಕೇವಲ ಆರು ಗಂಟೆಗಳಲ್ಲಿ ರಸ್ತೆ ಮಾರ್ಗವಾಗಿ ಅಂಬುಲೆನ್ನ್ ನಲ್ಲಿ ಕರೆದೊಯ್ಯಲಾಗಿದೆ.
ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಉಪ್ಪಳದ ಮಣಿಮುಮಡದ ಇಬ್ರಾಹಿಂ ಅವರ ಪುತ್ರಿ ಆಯಿಷತ್ ನುಸ್ರಾ (20) ಅವರು ಅಸೌಖ್ಯ ನಿಮಿತ್ತ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಪಸಣೆಯ ಸಂದರ್ಭ ಕರುಳಿಗೆ ಸಂಬಂಧಿಸಿದ ತೊಂದರೆ ಎಂಬುದು ತಿಳಿದು ಬಂದಿತ್ತು.
ತುರ್ತು ಶಸ್ತ್ರ ಚಿಕಿತ್ಸೆ ನಡೆಸದಿದ್ದರೆ ಜೀವಕ್ಕೆಅಪಾಯ ಇದೆ ಎಂದು ವೈದ್ಯರು ತಿಳಿಸಿದ್ದರು.
ಕೂಡಲೇ ಕೇರಳ ಎರ್ನಕುಲಂ ಲೇಕ್ ಶೋರ್ ಆಸ್ಪತ್ರೆಯನ್ನು ಸಂಪರ್ಕಿಸಿ ಆರು ಗಂಟೆಗಳ ಒಳಗೆ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ತಿಳಿಸಿದ್ದರು.
ಕೂಡಲೇ ನುಸ್ರಾ ಅವರ ಜೀವ ರಕ್ಷಣೆಗೆ ಪೊಲೀಸ್, ಸಾಮಾಜಿಕ ಕಾರ್ಯಕರ್ತರು, ಆಂಬುಲೆನ್ಸ್ ಚಾಲಕರು ಮತ್ತಿತರರು ಕಟಿಬದ್ಧರಾದರು.
ವಾಟ್ಸಪ್ ಮತ್ತು ಫೇಸ್ ಬುಕ್ ಮೂಲಕ ವಿನಂತಿ ಸಂದೇಶ ಪ್ರಸಾರ ಮಾಡಲಾಯಿತು.
ಯಾವುದೇ ರಸ್ತೆ ಅಡಚಣೆಗಳು ಎದುರಾಗದೆ ಆಂಬುಲೆನ್ಸ್ ಎರ್ನಾಕುಲಂ ತಲುಪಲು ವ್ಯವಸ್ಥೆ ಕಲ್ಪಿಸಲಾಯಿತು.
ಮಂಗಳೂರಿನಿಂದ ಹೊರಟ ಆಂಬುಲೆನ್ಸ್ ಕಾಸರಗೋಡಿನವರೆಗೆ ನಾಲ್ಕು ಆಂಬುಲೆನ್ಸ್ ಗಳು ಹಾಗೂ ಪೊಲೀಸ್ ವಾಹನಗಳು ಬೆಂಗಾವಲಾಗಿ ಸಂಚರಿಸಿದವು.
ಅಲ್ಲಿಂದ ಮುಂದಕ್ಕೆ ಇದೇ ರೀತಿಯ ಬೆಂಗಾವಲಿನೊಂದಿಗೆ ಆಂಬುಲೆನ್ಸ್ ಎರ್ನಾಕುಲಂ ತಲುಪಿದ್ದು ಅದಾಗಲೇ ಶಸ್ತ್ರ ಚಿಕಿತ್ಸೆಗೆ ಅಲ್ಲಿನ ವೈದ್ಯರು ಎಲ್ಲಾ ಸಿದ್ಧತೆ ನಡೆಸಿದ್ದರು.
ಮಂಗಳೂರು ನಗರದ ಫಳ್ನಿರ್ ಯುನಿಟಿ ಆಸ್ಪತ್ರೆಯಿಂದ ಡಿಸೆಂಬರ್ 15 ರ ರಾತ್ರಿ 9.30 ಕ್ಕೆ ಹೊರಟ ಆಂಬುಲೆನ್ಸ್ ಎರ್ನಾಕುಲಂನ ಲೇಕ್ ಶೋರ್ ಆಸ್ಪತ್ರೆಗೆ ಡಿಸೆಂಬರ್ 16 ರಂದು ಮುಂಜಾನೆ 3.30 ಗಂಟೆಗೆ ತಲುಪಿದ್ದು, ಕೂಡಲೇ ವಿದ್ಯಾರ್ಥಿನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.
ವಿದ್ಯಾರ್ಥಿನಿಯ ಜೀವರಕ್ಷಣೆಗೆ ಸಕಾಲದಲ್ಲಿ ಸಾಹಸ ಪ್ರದರ್ಶಿದ ಆಂಬುಲೆನ್ಸ್ ಚಾಲಕ ಸಿರಾಜ್ ಅವರನ್ನು ಸರ್ವರು ಅಭಿನಂದಿಸಿದ್ದಾರೆ.
ಕರ್ನಾಟಕ ಕೇರಳ ಪೊಲೀಸರು, ಚೈಲ್ಡ್ ಲೈನ್ ಸಂಘಟನೆ ಮತ್ತು ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಾತ್ರಿ ಪೂರ್ತಿ ನಿದ್ದೆಗೆಟ್ಟು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪೂರಕವಾಗಿ ಶೂನ್ಯ ಸಾರಿಗೆ ನಿರ್ಮಾಣ ಮಾಡಿದ್ದರಿಂದ ಈ ಸಾಹಸ ಸಾಧ್ಯವಾಗಿದೆ.
You must be logged in to post a comment Login