LATEST NEWS
ಮಂಗಳೂರು – ಹೊಸ ವರ್ಷಾಚರಣೆ ಹಿನ್ನೆಲೆ ಪೊಲೀಸರಿಂದ ತಪಾಸಣೆ
ಮಂಗಳೂರು ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನಲೆ ಮಂಗಳೂರಿನಲ್ಲಿ ಪೊಲೀಸರು ಬಿಗಿ ತಪಾಸಣೆಯಲ್ಲಿ ತೊಡಗಿಕೊಂಡಿದ್ದಾರೆ. ನಗರದ ಸುಮಾರು 19 ಕಡೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ರಾತ್ರಿ 11 ಗಂಟೆಯಿಂದ ಪೊಲೀಸರು ತಪಾಸಣೆ ಆರಂಭಿಸಿದ್ದಾರೆ. ಮಧ್ಯ ಸೇವನೆ ಮಾಡಿ ವಾಹನ ಚಲನೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ. ಹೊಸ ವರ್ಷಾಚರಣೆ ಹಿನ್ನಲೆ ನಗರದಾದ್ಯಂತ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಅಹಿತಕರ ಘಟನೆಗಳು ನಡೆಯದಂತೆ ನಗರ ವ್ಯಾಪ್ತಿಯಲ್ಲಿ ನೂರಾರು ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ.