LATEST NEWS
ಇಸ್ರೆಲ್ ಗೆ ಇರಾನ್ ಎಚ್ಚರಿಕ – ಸಂಘರ್ಷದಲ್ಲಿ ಹೆಜ್ಬುಲ್ಲಾ ಸೇರಿಕೊಂಡರೆ ಇಸ್ರೇಲ್ ದೊಡ್ಡ ನಷ್ಟ ಅನುಭವಿಸುತ್ತೆ
ಟೆಹ್ರಾನ್ ಅಕ್ಟೋಬರ್ 16: ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಯುದ್ದ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿದ್ದು, ಇದೀಗ ಈ ಯುದ್ದದಲ್ಲಿ ಇರಾನ್ ಸೇರಿಕೊಳ್ಳುವ ಸಾಧ್ಯತೆ ಇದ್ದು, ಇಸ್ರೇಲ್ ಪಡೆಗಳು ಗಾಜಾದ ಮೇಲೆ ಮಿಲಿಟರ್ ಕಾರ್ಯಾಚರಣೆ ನಡೆಸಿದರೆ ಇದು ಮಧ್ಯಪ್ರಾಚ್ಯದಲ್ಲಿ ಬೇರೆಡೆ ಸಂಘರ್ಷಗಳನ್ನು ಹೆಚ್ಚಿಸಬಹುದು ಎಂದು ಇರಾನ್ ಎಚ್ಚರಿಸಿದೆ.
ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ನಿಶಸ್ತ್ರ ನಾಗರಿಕರು ಮತ್ತು ಗಾಜಾದ ಜನರ ವಿರುದ್ಧ ಇಸ್ರೇಲ್‌ನ ದಾಳಿಗಳು ಮುಂದುವರಿದರೆ, ಪರಿಸ್ಥಿತಿಯ ನಿಯಂತ್ರಣ ಮತ್ತು ಸಂಘರ್ಷಗಳ ವಿಸ್ತರಣೆಯನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ ಒಂದು ವೇಳೆ ಈ ಸಂಘರ್ಷದಲ್ಲಿ ಹೆಜ್ಬುಲ್ಲಾ ಸೇರಿಕೊಂಡರೆ, ಯುದ್ಧವು ಪಶ್ಚಿಮ ಏಷ್ಯಾದ ಇತರ ಭಾಗಗಳಿಗೆ ಹರಡಬಹುದು. ಇಸ್ರೇಲ್ ದೊಡ್ಡ ನಷ್ಟವನ್ನು ಎದುರಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ಲೆಬನಾನ್‌ನ ಹಿಜ್ಬುಲ್ಲಾ ಗುಂಪು ಯುದ್ಧದ ಎಲ್ಲಾ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಹೀಗಾಗಿ ಇಸ್ರೇಲ್ ಗಾಜಾದ ಮೇಲಿನ ದಾಳಿಯನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಬೇಕು ಎಂದರು
ಅಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಅಮೆರಿಕ ಇಸ್ರೇಲ್ ಗೆ ಬೇಷರತ್ ಬೆಂಬಲವನ್ನು ನೀಡಿದ್ದನ್ನು ಅಮೀರ್-ಅಬ್ದುಲ್ಲಾಹಿಯಾನ್ ಟೀಕಿಸಿದರು.