Connect with us

  DAKSHINA KANNADA

  ‘ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ಹಾರಿಸಿಯೇ ಸಿದ್ದ; ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಘೋಷಣೆ

  ಮಂಡ್ಯ ಕೆರೆಗೋಡು ಗ್ರಾಮದಲ್ಲಿ ಹನಮಧ್ವಜವನ್ನು ಹಾರಿಸಿಯೇ ಸಿದ್ದ ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮುಖಂಡ ಶರಣ್ ಪಂಪ್ ವೆಲ್ ಘೋಷಿಸಿದ್ದಾರೆ.

  ಮಂಗಳೂರು : ಮಂಡ್ಯ ಕೆರೆಗೋಡು ಗ್ರಾಮದಲ್ಲಿನ ಹನುಮಧ್ವಜ ತೆರವು ಮಾಡಿಸಿದ್ದ ಸರ್ಕಾರದ ಕ್ರಮವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

  ಸರ್ಕಾರ ವಿರುದ್ದ ಘೋಷಣೆ ಕೂಗಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸರ್ಕಾರದ ವಿದುದ್ದ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜದ ಮೇಲೆ ಅಪಾರ ಗೌರವ ಇದೆ ಹಾಗೆಯೇ ಹನುಮಧ್ವಜದ ಮೇಲೂ ಗೌರವ ಇದೆ. 40ವರ್ಷಗಳಿಂದ ಈ ಗ್ರಾಮದಲ್ಲಿ ಹನುಮಧ್ವಜವನ್ನು ಹಾಕುತ್ತಿದ್ದರು.

  ರಾಜ್ಯದಲ್ಲಿ ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರ ಇದ್ದ ಕಾರಣ ಹಿಂದೂ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು ರಾಜ್ಯದಲ್ಲಿ ಹಿಂದೂ ಧ್ವಜ ಹಾಗೂ ರಾಷ್ಟ್ರ ಧ್ವಜ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತಿದೆ. ಭಜರಂಗದಳ ಬ್ಯಾನ್ ಮಾಡ್ತಿವಿ ಹೇಳಿದ್ದಾರೆ ಅದರೆ ಅದು ಎಂದೂ ಸಾಧ್ಯವಿಲ್ಲ. ಕೆರೆಗೋಡು ಗ್ರಾಮದಲ್ಲಿ ಹನಮಧ್ವಜವನ್ನು ಹಾರಿಸಿಯೇ ಸಿದ್ದ ಎಂದು ಘೋಷಿಸಿದರು.

   

  Share Information
  Advertisement
  Click to comment

  You must be logged in to post a comment Login

  Leave a Reply