LATEST NEWS
ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಂಬನಿ

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಂಬನಿ
ಕುಂದಾಪುರ ಡಿಸೆಂಬರ್ 29: ಖ್ಯಾತ ಅಂಕಣಕಾರ ವಡ್ಡರ್ಸೆ ರಾಘು ರಾಮ್ ಶೆಟ್ಟಿ ಮಗ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಕಾಲಿಕ ಸಾವಿಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕಂಬನಿ ಮಿಡಿದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಧುಕರ್ ಶೆಟ್ಟಿ ಆಸ್ಪತ್ರೆ ದಾಖಲೆಯಾಗಿದ್ದಾಗ ಸಂಬಂಧಿಕರು ನಂಗೆ ಕರೆ ಮಾಡಿ ಹೈದಾಬಾದ್ ಆಸ್ಪತ್ರೆಯಲ್ಲಿ ಇದ್ದೇವೆ ಏನೂ ಸಮಸ್ಯೆ ಗೊತ್ತಾಗುತ್ತಿಲ್ಲ ವಿಚಾರಿಸಿ ಹೇಳಿ ಎಂದು ಕೋರಿಕೆ ಇಟ್ಟಿದ್ದರು, ನಾನು ಹಿರಿಯ ವೈದ್ಯಾಧಿಕಾರಿಗಳನ್ನು ವಿಚಾರಿಸಿದಾಗ ಎಚ್1 ಎನ್1 ಇದೆ ಸ್ವಲ್ಪ ಗಂಭೀರ ವಾಗಿದೆ ಎಂದು ತಿಳಿಸಿದ್ದರು. ಅಲ್ಲದೆ ರಾಜ್ಯದ ಮುಖ್ಯ ಮಂತ್ರಿಗಳು ಚಿಕಿತ್ಸೆ ಬಗ್ಗೆ ಗಮನಹರಿಸಿದ್ದಾರೆ ಎಂದು ತಿಳಿಸಿದ್ದರು.

ಮಧುಕರ್ ಶೆಟ್ಟಿ ಆತ್ಮೀಯರು ಅಷ್ಟೇ ಅಲ್ಲದೆ ನಮ್ಮದೆ ಊರಿನವರು ನಾನು ನಡೆದು ಬಂದ ದಾರಿ ಅವರು ನಡೆದು ಬಂದ ದಾರಿ ಒಂದೇ ತರದ್ದು ಹಲವು ಸಲ ಪ್ರೀತಿಯಿಂದ ಜೊತೆ ಊಟಮಾಡಿದ್ದೇವೆ. ಅಂತಹ ಅಧಿಕಾರಿ ಇರಬೇಕಿತು, ರಾಜ್ಯಕ್ಕೂ ರಾಷ್ಟಕ್ಕೂ ದೊಡ್ಡ ಪರಿಶುದ್ದ, ನಿಶ್ಕಂಲಕ ವ್ಯಕ್ತಿ ಸಣ್ಣ ಪ್ರಾಯದಲ್ಲಿ ತೀರಿ ಅಪಾರವಾದ ನಷ್ಟ ವಾಗಿದೆ ಅಂತ್ಯ ಕ್ರಿಯೆಯಲ್ಲಿ ನಾನು ಭಾಗಿಯಾಗುತ್ತೇನೆ. ಅವರ ಕುಟುಂಬ ನೋವು ಸಹಿಸುವ ಶಕ್ತಿ ಕೊಡಲಿ
ಮಧುಕರ್ ಆತ್ಮಕ್ಕೆ ಶಾಂತಿ ನೀಡಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ