LATEST NEWS
ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಿದ ವಿಧ್ಯಾರ್ಥಿನಿ….!!
ಮಂಗಳೂರು: ಮಾರಕ ರೋಗ ಕ್ಯಾನ್ಸರ್ ನ ಚಿಕಿತ್ಸೆಯಿಂದಾಗಿ ತಲೆ ಕೂದಲು ಕಳೆದುಕೊಳ್ಳುವ ರೋಗಿಗಳಿಗೆ ನೆರವಾಗಲು ಮಂಗಳೂರಿನ ವಿಧ್ಯಾರ್ಥಿಯೊಬ್ಬಳು ತನ್ನ ತಲೆಕೂದಲನ್ನೇ ದಾನ ಮಾಡಿ ಮಾನವೀಯತೆ ಮೆರೆದಿದ್ದಾಳೆ. 11 ರ ಹರೆಯದ ಎಕ್ಕೂರಿನ ಮಂಗಳೂರು ಕೇಂದ್ರೀಯ ವಿದ್ಯಾಲಯ ಸಂಖ್ಯೆ 2 ರ ಆರನೇ ತರಗತಿ ವಿದ್ಯಾರ್ಥಿನಿ ಡಿಲ್ನಾ ಕ್ಯಾನ್ಸರ್ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಕೂದಲು ಕಳೆದುಕೊಂಡ ಜನರಿಗೆ ವಿಗ್ ತಯಾರಿಸಲು ತಮ್ಮ ಕೇಶವನ್ನು ದಾನ ಮಾಡಿದ್ದಾರೆ.
9ರ ಹರೆಯದಲ್ಲಿ ಕೂದಲನ್ನು ದಾನ ಮಾಡಲು ನಿರ್ಧರಿಸಿದ್ದು, ಕಳೆದ ಎರಡು ವರ್ಷದಿಂದ ಕೂದಲು ಕತ್ತರಿಸದೆ ಬೆಳೆಸಿ ಜ.14ರಂದು 11 ನೇ ಹುಟ್ಟುಹಬ್ಬದಂದು ನೀಡಲು ನಿರ್ಧರಿಸಿದ್ದಳು. ಕೋವಿಡ್ ಲಾಕ್‌ಡೌನ್‌ನಿಂದ ಸಾಧ್ಯವಾಗಲಿಲ್ಲ. ಇದೀಗ ಸೆ.22ರಂದು ಕೇಶವನ್ನು ಬಡ ಕ್ಯಾನ್ಸರ್ ರೋಗಿಗಳಿಗಾಗಿ ವಿಗ್‌ಗಳನ್ನು ತಯಾರಿಸಿ ನೀಡುವ ಕೇರಳ ತ್ರಿಶೂರಿನ ಮಿರಾಕಲ್ ಚಾರಿಟೆಬಲ್ ಅಸೋಸಿಯೇಶನ್ ನೇತೃತ್ವದ ಹೇರ್ ಬ್ಯಾಂಕ್‌ಗೆ ಕೂದಲನ್ನು ಕಳುಹಿಸಿಕೊಟ್ಟಿದ್ದಾಳೆ.
ಡಿಲ್ನಾ ಪತ್ರಕರ್ತ ರಾಜೇಶ್ ಕುಮಾರ್ ಕಾಂಕೋಲ್ ಮತ್ತು ಬಲ್ಮಠದ ಯೆನೆಪೋಯ ಕಲಾ,ವಿಜ್ಞಾನ, ವಾಣಿಜ್ಯ ಕಾಲೇಜಿನ ಉಪನ್ಯಾಸಕಿ ಕೆ.ಎಂ.ಜಮುನಾ ದಂಪತಿ ಪುತ್ರಿ. ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಕಾಂಕೋಲ್‌ನವರಾದ ಅವರು ಪ್ರಸ್ತುತ ಮಂಗಳೂರಿನ ಎಕ್ಕೂರಿನಲ್ಲಿ ನೆಲೆಸಿದ್ದಾರೆ.