KARNATAKA
ರಾಜ್ಯ ಸರ್ಕಾರದಿಂದ ನಟ `ಶಿವರಾಜ್ ಕುಮಾರ್’ಗೆ ಗನ್ ಮ್ಯಾನ್

ಬೆಂಗಳೂರು, ಮಾರ್ಚ್ 22 : ನಟ ಶಿವರಾಜ್ ಕುಮಾರ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ಬಿ.ಟಿ. ಲಲಿತಾ ನಾಯಕ್ ಸ್ಪೋಟಕ ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಶಿವರಾಜ್ ಕುಮಾರ್ ಭದ್ರತೆಗಾಗಿ ಗನ್ ಮ್ಯಾನ್ ನೀಡಿದೆ.
ನಟ ಡಾ.ಶಿವರಾಜ್ ಕುಮಾರ್ ಭದ್ರತೆ ಬಗ್ಗೆ ಹೆಚ್ಚು ಒತ್ತು ನೀಡಿರುವ ಗೃಹ ಸಚಿವಾಲಯ ನಟ ಶಿವರಾಜ್ ಕುಮಾರ್ ಮನೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ. ಎರಡು ಪಾಳಯದಲ್ಲಿ ನಾಲ್ಕು ಪೊಲೀಸರು ಹಾಗೂ ಗನ್ ಮ್ಯಾನ್ ಗಳನ್ನು ನಿಯೋಜನೆ ಮಾಡಿದೆ. ನಟ ಶಿವರಾಜ್ ಕುಮಾರ್ ಮನೆಯ ಬಳಿ ಪೊಲೀಸರು ಕಾವಲಿದ್ದು, ಭದ್ರತೆ ನೀಡುತ್ತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಬಿ.ಟಿ. ಲಲಿತಾ ನಾಯಕ್, ನನಗೆ, ಹಿರಿಯ ಪತ್ರಕರ್ತರೊಬ್ಬರಿಗೆ ಹಾಗೂ ನಟ ಶಿವರಾಜ್ ಕುಮಾರ್ ಗೆ ಜೀವ ಬೆದರಿಕೆ ಇದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.