LATEST NEWS
ಗುಂಡ್ಯ: ಕಾರಿನ ಮೇಲೆ ಮರಬಿದ್ದು ವ್ಯಕ್ತಿ ಮೃತ್ಯು

ಗುಂಡ್ಯ, ಜನವರಿ 02: ಕಾರಿನ ಮೇಲೆ ಮರಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಅಡ್ಡಹೊಳೆಯಲ್ಲಿ ಜ.2 ರಂದು ಬೆಳಿಗ್ಗೆ 7.30ರ ವೇಳೆಗೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಶಬ್ದ ಬಂದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ನಿಲ್ಲಿಸಿ ಬಾನೆಟ್ ತೆಗೆಯುತ್ತಿದ್ದ ವೇಳೆ ಹೆದ್ದಾರಿ ಬದಿಯಲ್ಲಿದ್ದ ಹಾಲುಮಡ್ಡಿ ಮರವೊಂದು ಕಾರು ಹಾಗೂ ಅವರ ಮೇಲೆಯೇ ಬಿದ್ದಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು ಕಾರಿನಲ್ಲಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.