Connect with us

  LATEST NEWS

  ಗುಜರಾತ್ ನಲ್ಲಿ 6 ತಿಂಗಳಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಬಲಿ – 80% ರಷ್ಟು ಯುವಜನರು

  ಅಹಮದಾಬಾದ್ ಡಿಸೆಂಬರ್ 03 : ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಒಟ್ಟು 1,052 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, 80 ಪ್ರತಿಶತದಷ್ಟು ಬಲಿಪಶುಗಳು 11-25 ವಯಸ್ಸಿನವರು ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಶುಕ್ರವಾರ ಹೇಳಿದ್ದಾರೆ.


  ಕೊರೊನಾ ಬಳಿಕ ದೇಶದಲ್ಲಿ ಯುವ ಸಮೂ ಹದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂಬ ಆತಂಕಗಳ ನಡುವೆ, ಗುಜರಾತಲ್ಲಿ 6 ತಿಂಗಳಲ್ಲಿ ಹೃದಯಾಘಾತಕ್ಕೆ 1,052 ಮಂದಿ ಬಲಿಯಾಗಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ ಮೃತಪಟ್ಟವರಲ್ಲಿ ಶೇ.80ರಷ್ಟು ಮಂದಿ 11ರಿಂದ 25 ವರ್ಷದ ವಯೋ ಮಾನದವರು ಎಂದು ಸಚಿವ ಕುಬೇರ್ ದಿನೋದರ್‌ ಹೇಳಿದ್ದಾರೆ. ರಾಜ್ಯದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಸುಮಾರು 2 ಲಕ್ಷ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ಸಿಪಿಆ‌ರ್ ಮಾಡುವ ತರಬೇತಿಯನ್ನು ನೀಡಲಾಗಿದೆ. ವೈದ್ಯಕೀಯ ತುರ್ತು ಸಮಯದಲ್ಲಿ ಇದು ಸಹಾಯ ಒದಗಿಸಲಿದೆ ಎಂದು ಹೇಳಿದ್ದಾರೆ.

  ‘ರಾಜ್ಯದಲ್ಲಿ ಯುವಜನತೆ ಆತಂಕದಲ್ಲಿ ದಿನ ಕಳೆಯುವಂ ತಾಗಿದೆ. ಕ್ರಿಕೆಟ್ ಆಡುವಾಗ, ಗರ್ಬಾ ನೃತ್ಯ ಮಾಡುವಾಗ ಯುವಕರು ಹೃದ ಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಿರುವು ದನ್ನು ನೋಡುತ್ತಿದ್ದೇವೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕರಿಗೂ ತರಬೇತಿಯಲ್ಲಿ ಭಾಗಿಯಾಗುವಂತೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

  Share Information
  Advertisement
  Click to comment

  You must be logged in to post a comment Login

  Leave a Reply