Connect with us

LATEST NEWS

GST – ಸರಕು ಮತ್ತು ಸೇವಾ ತೆರಿಗೆ – ಒಂದು ಸರಳ ತೆರಿಗೆ ವ್ಯವಸ್ಥೆ.

ಒಂದು ದೇಶ ಮುಂದುವರಿಯ ಬೇಕಾದರೆ ಸರ್ವೋತೋಮುಖ ಬದಲಾವಣೆಗೆ ಅಗತ್ಯ.ಅದರಲ್ಲಿ ತೆರಿಗೆ ಸಂಗ್ರಹಣೆ ಅಂತ್ಯಂತ ಅಗತ್ಯವಾದ ಹಾಗೂ ದೇಶದ ಅಭಿವೃದ್ಧಿಗೆ  ಪೂರಕವಾದ ವ್ಯವಸ್ಥೆ.ಅದರಲ್ಲಿ ಈಗಿನ ಸೇರ್ಪಡೆ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.).

ಇದೊಂದು ಸುಲಭವಾದ ತೆರಿಗೆ ವ್ಯವಸ್ಥೆ. ಈ ತೆರಿಗೆಯ ಮುಖ್ಯ ಉದ್ದೇಶವೆಂದರೆ ಬೇರೆ ಬೇರೆ ರೀತಿಯಲ್ಲಿ ಜಾರಿಯಲ್ಲಿರುವ ತೆರಿಗೆ ಪದ್ಧತಿಗಳನ್ನು ಹೋಗಲಾಡಿಸಿ ಒಂದೇ ರೀತಿಯ ತೆರಿಗೆ ನೀಡುವ ವಿಧಾನ. ಈ ಮೊದಲು ಜಾರಿಯಲ್ಲಿದ್ದ ಮೌಲ್ಯ ವರ್ಧಿತ ತೆರಿಗೆ (VAT), ಸೇವಾ ತೆರಿಗೆ(Service Tax), ಅಬಕಾರಿ ತೆರಿಗೆ(Excise Duty) ಇತ್ಯಾದಿ ಹಲವು ರೀತಿಯ ತೆರಿಗೆಗಳನ್ನು ತೆಗೆದು ಒಂದೇ ರೀತಿಯ ತೆರಿಗೆ ಸಂಗ್ರಹಣೆ ವ್ಯವಸ್ಟ್ಗೆಯೇ ಸರಕು ಮತ್ತು ಸೇವಾ ತೆರಿಗೆ. ಇದರಿಂದ ಸಾಕಷ್ಟು ಲಾಭಗಳಿವೆ. ಉದಾಹರಣೆಗೆ ಮೊದಲು ನೀವು ಒಂದು ಸರಕನ್ನು ಆಮದು ಮಾಡುವುದಾದರೆ ಅದಕ್ಕೆ ಮೊದಲ ಹಂತದಲ್ಲಿ ಅಬಕಾರಿ ತೆರಿಗೆ ತದ ನಂತರ ಮೌಲ್ಯ ವರ್ಧಿತ ತೆರಿಗೆ ನಂತರ ಸೇವಾ ತೆರಿಗೆ ಕಟ್ಟುತ್ತಿದ್ದೆವು. ಇದೆಲ್ಲಾ ತೆರಿಗೆಗಳು ಸೇರಿ ಅನಗತ್ಯವಾಗಿ ತೆರಿಗೆ ಮೇಲೆ ತೆರಿಗೆ ಕೊಡುತ್ತಿದ್ದೆವು(Double Taxation).ಸರಿ ಸುಮಾರು 38% ತೆರಿಗೆ ಮುಂಚೆ ತಿಳಿದೋ ತಿಳಿಯದೆಯೋ ನೀಡುತ್ತಿದ್ದೆವು.ಆದರೆ ಗ್ರಾಹಕರು ಈ ಹೊರೆಯಿಂದ ಈಗ ಮುಕ್ತವಾಗಿದ್ದಾರೆ. ಏಕೆಂದರೆ ಸರಕು ಮತ್ತು ಸೇವಾ ತೆರಿಗೆಯಲ್ಲಿ ಅತಿ ಹೆಚ್ಚಿನ ದರ 28% ಎಂದು ನಿಗದಿ ಪಡಿಸಲಾಗಿದೆ. ಒಟ್ಟಾರೆಯಾಗಿ ಐದು ರೀತಿಯ ದರಗಳನ್ನು ನಿಗದಿಪಡಿಸಲಾಗಿದೆ.ಅದನ್ನು 5%, 12%, 18% ಹಾಗೂ 28% ತೆರಿಗೆ ಮಾನ ಎಂದು ವಿಂಗಡಿಸಲಾಗಿದೆ. ಇದರಲ್ಲಿ ದೈನಂದಿನ ಬಳಕೆಯ ಹಾಲು, ತರಕಾರಿ, ಪ್ಯಾಕ್ ಮಾಡದ ಆಹಾರ ವಸ್ತುಗಳು ಇತ್ಯಾದಿ 149 ಬಗೆಯ ಸರಕುಗಳಿಗೆ ತೆರಿಗೆಯಿಂದ ಮನ್ನಣೆ ನೀಡಲಾಗಿದೆ. ಇದೊಂದು ಗ್ರಾಹಕರಿಗೆ ಕೇಂದ್ರ ಸರ್ಕಾರದ ಕೊಡುಗೆ ಎನ್ನಬಹುದು. ಮತ್ತೆ ಇನ್ನು ಇತರ ತೆರಿಗೆ ಇರುವ ಸರಕು ಹಾಗೂ ಸೇವೆಗಳಿಗೆ ಪ್ರತ್ಯೇಕ ಪಟ್ಟಿ ಬಿಡುಗಡೆಗೊಳಿಸಿದೆ.

ಈ ಹೊಸ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ನಮ್ಮ ದೇಶವನ್ನು ಇನ್ನೂ ಆರ್ಥಿಕವಾಗಿ ಸಧೃಢಗೊಳಿಸಿ ಮುಂದುವರಿದ ದೇಶವನ್ನಾಗಿ ಪರಿವರ್ತಿಸಲಿ ಎಂಬುದು ಎಲ್ಲರ ಆಶಯ.

ಲೇಖನ
ಸಚಿನ್ ಕೃಷ್ಣ ಭಟ್.

ಹಣಕಾಸು ಮತ್ತು ಖಾತೆ ವಿಭಾಗ, ಖಾಸಗಿ ಸೀಮಿತ

ಸರಕು ಹಾಗೂ ಸೇವಾ ತೆರಿಗೆಯನ್ನು ಹೇಗೆ ನೊಂದಾಯಿಸಬೇಕು ಮತ್ತು ತೆರಿಗೆ ಕಟ್ಟುವ ವಿಧಾನವನ್ನು ಮುಂದಿನ ಲೇಖನದಲ್ಲಿ ನಿರೀಕ್ಷಿಸಿ…

Share Information
Continue Reading
Advertisement
Click to comment

Leave a Reply

Your email address will not be published. Required fields are marked *