Connect with us

  GST – ಸರಕು ಮತ್ತು ಸೇವಾ ತೆರಿಗೆ – ನೋಂದಣಿ ಮತ್ತು ಸರಕು/ಸೇವಾ ಪಟ್ಟಿ ವಿವರ ಸಲ್ಲಿಸುವಿಕೆ.

  ಒಂದು ವರ್ಷದಲ್ಲಿ ವ್ಯವಹಾರದ ಒಟ್ಟು ಮೊತ್ತ ಇಪ್ಪತ್ತು ಲಕ್ಷಕ್ಕಿಂತ ಹೆಚ್ಚು ದಾಟಿದರೆ ತಕ್ಷಣವೇ ನೀವು ಜಿ.ಎಸ್.ಟಿ ಗೆ ನೋಂದಾಯಿಸಬೇಕು. ಇವಾಗಾಗಲೇ ಮೌಲ್ಯ ವರ್ಧಿತ ತೆರಿಗೆ ಅಥವಾ ಸೇವಾ ತೆರಿಗೆಗೆ ನೋಂದಾಯಿಸಿದ್ದಲ್ಲಿ ಜಿ.ಎಸ್.ಟಿ ಗೆ ವಿಲೀನಗೊಳಿಸಬಹುದು. ಇದರ ಮುಖಾಂತರವೇ ನಿಮ್ಮ ಜಿ.ಎಸ್.ಟಿ ನೋಂದಣಿ ಸಂಖ್ಯೆಯನ್ನು ಪಡೆದು ಕೊಳ್ಳಬಹುದು.ಈ ವರೆಗೆ ನೋಂದಾಯಿಸದೆ ಇದ್ದವರು ಹಾಗೂ ಇಪ್ಪತ್ತು ಲಕ್ಷಕ್ಕಿಂತ ಅಧಿಕ ವ್ಯಾಪಾರ-ವಹಿವಾಟು ಇರುವವರು ಹೊಸದಾಗಿ ನೋಂದಾಯಿಸಬೇಕು ಹಾಗೂ ನಂತರ ನೀವು ಜಿ ಎಸ್ ಟಿ ನೋಂದಣಿ ಸಂಖ್ಯೆಯನ್ನು ಒನ್ಲೈನ್ ಪಡೆದುಕೊಳ್ಳಬಹುದು. ಈ ನೋಂದಾಯಿತ ಸಂಖ್ಯೆಯನ್ನು ನೀವು ಕಡ್ಡಾಯವಾಗಿ ನಿಮ್ಮ ಸರಕು/ಸೇವಾ ಪಟ್ಟಿಯಲ್ಲಿ ಮುದ್ರಿಸಬೇಕು.
  ಜಿ ಎಸ್ ಟಿ ನಿಯಮದ ಪ್ರಕಾರ ನೀವು ಸರಕು ಅಥವಾ ಸೇವೆ ಒದಗಿಸಿದಾಗ, ಮಾರಾಟಗಾರರ ಪೂರ್ಣ ವಿಳಾಸ, ನೋಂದಣಿ ಸಂಖ್ಯೆ,  ಖರೀದಿದಾರರ ಪೂರ್ಣ ವಿಳಾಸ ಹಾಗೂ ನೋಂದಣಿ ಸಂಖ್ಯೆ ನಮೂದಿಸುವುದು ಕಡ್ಡಾಯ. ನೀವು ಪ್ರತೀ ಬಾರಿ ಒಟ್ಟು ಮೂರು ಪ್ರತಿ ಸರಕು/ಸೇವಾ ಪಟ್ಟಿಗಳನ್ನು ಸಿದ್ಧಪಡಿಸಬೇಕು. ಒಂದು ಪ್ರತಿ ಖರೀದಿದಾರನಿಗೆ, ಇನ್ನೊಂದು ಪ್ರತಿ ಸಾಗುವಾರಾನಿಗೆ ಹಾಗೂ ಮೂರನೆಯ ಪ್ರತಿಯನ್ನು ಮಾರಾಟಗಾರರು ನೋಂದಾಯಿಸಿದ ವ್ಯವಹಾರದ ಶಾಖೆಯಲ್ಲಿ ಒಂದರಂತೆ ನಂತರ ಒಂದು ಕ್ರಮವಾಗಿ  ಜೋಡಣೆ ಮಾಡಿಡಬೇಕು.ಈ ಸರಕು/ಸೇವಾ ಪಟ್ಟಿಯಲ್ಲಿ ನಿಮ್ಮ ಆಂತರಿಕ ಕ್ರಮ ಸಂಖ್ಯೆಯನ್ನು ಒದಗಿಸಬೇಕು. ತದನಂತರ ಇದನ್ನು ಜಿ.ಎಸ್.ಟಿ ತಿಂಗಳ/ಮೂರು ತಿಂಗಳಿಗೊಮ್ಮೆ ಒನ್ಲೈನ್ ವರದಿ ಸಲ್ಲಿಸುವಾಗ
  ಸರಕುಪಟ್ಟಿಯ ಕ್ರಮ ಸಂಖ್ಯೆ ಸಮೇತ ನಮೂದಿಸಬೇಕು.
  ಈ ಜಿ.ಎಸ್.ಟಿ ಪ್ರತೀ ತಿಂಗಳು, ತ್ರೈ ಮಾಸಿಕ ಹಾಗೂ ವಾರ್ಷಿಕ ವರದಿ ಸಲ್ಲಿಕೆಯಲ್ಲಿ ಹಲವಾರು ವಿಧಧ ಅರ್ಜಿಗಳಿವೆ. ಅದನ್ನು ಹೇಗೆ ವರದಿ ಸಲ್ಲಿಸಬೇಕು ಎಂಬುದನ್ನು ಮುಂದಿನ ಲೇಖನದಲ್ಲಿ ನಿರೀಕ್ಷಿಸಿ….
  ಸಚಿನ್ ಕೃಷ್ಣ ಭಟ್
  ವ್ಯವಹಾರ ಮತ್ತು ಖಾತೆ ವಿಭಾಗ,
  ಖಾಸಗಿ ಸೀಮಿತ.
  Share Information
  Advertisement
  Click to comment

  You must be logged in to post a comment Login

  Leave a Reply