LATEST NEWS
ಎಮ್ ಆರ್ ಪಿ ಎಲ್ ವಿರುದ್ದ ಪೊರಕೆ ಹಿಡಿದು ಪ್ರತಿಭಟನೆ
ಎಮ್ ಆರ್ ಪಿ ಎಲ್ ವಿರುದ್ದ ಪೊರಕೆ ಹಿಡಿದು ಪ್ರತಿಭಟನೆ
ಮಂಗಳೂರು ಜನವರಿ 10: ಕೋಕ್ ಸಲ್ಫರ್ ಘಟಕದಿಂದ ಉಂಟಾಗಿರುವ ಮಾಲಿನ್ಯದಿಂದ ಊರಿನ ಪರಿಸರವನ್ನು ರಕ್ಷಿಸಲು ಸರಕಾರ ಹೊರಡಿಸಿರುವ ಆರು ಅಂಶಗಳ ಪರಿಹಾರವನ್ನು ಜಾರಿಗೊಳಿಸದಿರುವ ಎಮ್ಆರ್ ಪಿಎಲ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ, ಎಮ್ ಆರ್ ಪಿ ಎಲ್ ವಿಸ್ತರಣೆ ಕೈ ಬಿಡುವಂತೆ ಆಗ್ರಹಿಸಿ ಜೋಕಟ್ಟೆ, ಕಳವಾರು, ತೋಕೂರು ಗ್ರಾಮಸ್ಥರು ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿ ವರಗೆ ಪೊರಕೆ ಹಿಡಿದು ಮೆರವಣಿಗೆ ನಡೆಸಿದರು.
ಪರಿಸರ ನಿಯಮಗಳನ್ನು ಉಲ್ಲಂಘಿಸಿ ಎಮ್ಆರ್ ಪಿಎಲ್ ಜೋಕಟ್ಟೆಯ ಜನವಸತಿ ಪ್ರದೇಶದಲ್ಲಿ ಪೆಟ್ ಕೋಕ್, ಸಲ್ಫರ್ ಘಟಕ ಸ್ಥಾಪಿಸಿದೆ. ಕಂಪೆನಿಯ ವಿಷಕಾರಿ ಹಾರುಬೂದಿಯಿಂದ ಪರಿಸರದ ಗ್ಯಾಮಸ್ಥರ ಬದುಕು ನರಕವಾಗಿದೆ.
ಈ ಕುರಿತು ಗ್ರಾಮಸ್ಥರು ನಡೆಸಿದ ಹೋರಾಟದ ಪರಿಣಾಮವಾಗಿ ಸರಕಾರ ಪರಿಹಾರ ಕ್ರಮಗಳನ್ನು ಘೋಷಿಸಿದ್ದರೂ ಕಂಪೆನಿ ಅವುಗಳನ್ನು ಜಾರಿಗೆ ತರದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಸರಕಾರದ ಅದೇಶ ಅನುಷ್ಠಾನ ಸಂಬಂಧಿಸಿ ರಚನೆಯಾಗಿರುವ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕನಿಷ್ಠ ಸಭೆಯನ್ನು ಸೇರುತ್ತಿಲ್ಲ.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಕಂಪೆನಿಯ ಹಿತಕಾಯುವುದರಲ್ಲಿ ನಿರತರಾಗಿದ್ದಾರೆ. ಧರ್ಮ ಧರ್ಮಗಳ ನಡುವೆ ಎತ್ತಿಕಟ್ಟಿ ದೇವರನ್ನು ಬೀದಿಗೆ ತಂದು ಮತಗಳ ಧ್ರುವೀಕರಣ ನಡೆಸಿ ಗೆಲುವಿನ ರುಚಿ ಹಿಡಿದಿರುವ ಕಟೀಲ್ ಅವರಿಗೆ ಜೋಕಟ್ಟೆಯಲ್ಲಿ ಕೆಮಿಕಲ್ ಮಾಲಿನ್ಯದಿಂದ ಹತಾಶರಾಗಿರುವ ಹಿಂದು ಮುಸ್ಲಿಂ ಅಮ್ಮಂದಿರ ಕಣ್ಣೀರು ಈ ಬಾರಿಯ ಚುನಾವಣೆಯಲ್ಲಿ ಶಾಪವಾಗಿ ಕಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.